ಕರೆ ಮಾಡಲು ಯಾರಾದ್ರೂ ಮೊಬೈಲ್ ಕೇಳಿದ್ರೆ ಕೊಡೋ ಮುನ್ನ ಎಚ್ಚರ! ಕೊಟ್ರೆ ಈ ವ್ಯಕ್ತಿಗಾದಂತೆ ನಿಮ್ಗೂ ಆಗ್ಬಹುದು

Man mobile
Published on

ದಾವಣಗೆರೆ: ಒಂದು ಕಾಲ್​ ಮಾಡಿ ಕೊಡುತ್ತೇನೆ ಸ್ವಲ್ಪ ನಿಮ್ಮ ಮೊಬೈಲ್ ಕೊಡಿ ಅಂತಾ ಯಾರಾದರೂ ಕೇಳಿದಾಗ ಸ್ವಲ್ಪವೂ ಯೋಚಿಸದೇ ಮೊಬೈಲ್​ ನೀಡಿದರೆ, ಕೆಲವೊಮ್ಮೆ ಏನಾಗಬಹುದು ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ.

ಒಂದು ಕಾಲ್‌ ಮಾಡಬೇಕು ಅಂತಾ ಮೊಬೈಲ್‌ ಪಡೆದುಕೊಂಡು ವ್ಯಕ್ತಿಯೊಬ್ಬ ಮೊಬೈಲ್‌ನಲ್ಲಿ ಮಾತನಾಡುತ್ತಲೇ ಮೊಬೈಲ್​ ಸಮೇತ ಪರಾರಿಯಾಗಿರುವ ಘಟನೆ ದಾವಣಗೆರೆಯ ಸರ್​ಎಂವಿ ಕಾಲೇಜಿನ ಸಮೀಪದ ಶ್ರೀಗುರು ಕೊಟ್ಟೂರೇಶ್ವರ ಬೇಕರಿಯಲ್ಲಿ ನಡೆದಿದೆ.

ಕಿರಣ್‌ಕುಮಾರ್‌ ಮೊಬೈಲ್‌ ಕಳೆದುಕೊಂಡ ಬೇಕರಿ ಕಾರ್ಮಿಕ. ಅಯ್ಯೋ ಪಾಪ ಅಂತಾ ಮೊಬೈಲ್‌ ಕೊಟ್ಟಿದ್ದೇ ತಪ್ಪಾಯ್ತಾ ಅನ್ನುವಂತಾಗಿದೆ. ಮೊಬೈಲ್‌ ಬ್ಯಾಟರಿ ಲೋ ಆಗಿದೆ. ಕಾಲ್‌ ಮಾಡಬೇಕು ಸ್ವಲ್ಪ ನಿಮ್ಮ ಮೊಬೈಲ್‌ ಕೊಡ್ತಿರಾ ಅಂತಾ ಖತರ್ನಾಕ್​ ಖದೀಮ ಮೊಬೈಲ್​ ಕೇಳಿದ್ದಾನೆ. ಅಯ್ಯೋ ಪಾಪ ಏನೋ ತುಂಬಾ ಮುಖ್ಯವಾದ ವಿಷಯ ಇರಬೇಕು ಅಂದುಕೊಂಡು ಬೇಕರಿ ಕಾರ್ಮಿಕ್‌ ಮೊಬೈಲ್‌ ಕೊಟ್ಟಿದ್ದ.

ಇತ್ತ ಮೊಬೈಲ್‌ನಲ್ಲಿ ಮಾತನಾಡಲು ಆರಂಭಿಸಿದ ಖದೀಮ ಮಾತನಾಡುತ್ತಲೇ ಮೊಬೈಲ್‌ ಸಮೇತ ಪರಾರಿಯಾಗಿದ್ದಾನೆ. ಕಿರಣ್​ ಕುಮಾರ್​ ಇತ್ತೀಚೆಗಷ್ಟೇ ಹೊಸ ಮೊಬೈಲ್‌ ಖರೀದಿಸಿದ್ದ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net