ಕಂಪೌಂಡ್ ಹಾರಿ ಆರ್ ಡಿ ಪಾಟೀಲ್ ಪರಾರಿ

IMG_20231107_100822
Published on

ಕಲಬುರಗಿ: ಪಿಎಸ್ ಐ, ಕೆಇಎ ಪರೀಕ್ಷಾ ಅಕ್ರಮದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾದ ಘಟನೆ ಭಾನುವಾರ ನಡೆದಿದೆ.

ಕೆಇಎ ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಎ 1 ಆರೋಪಿಯಾಗಿರುವ ಆರ್ ಡಿ ಪಾಟೀಲ್ ನನ್ನು ಹುಡುಕಾಡುತ್ತಿರುವ ಪೊಲೀಸರನ್ನು ಕಣ್ಮರೆಸಿಕೊಂಡಿದ್ದಾನೆ.

ಬಂಧನಕ್ಕೆ ಪೊಲೀಸರು ಬರುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಕಲಬುರಗಿಯ ಜೇವರ್ಗಿ ರಸ್ತೆಯಲ್ಲಿರುವ ವರದಾ ನಗರದ ಲ್ಲಿನ ಅಪಾರ್ಟ್ಮೆಂಟ್ ಒಂದರಿಂದ ಪರಾರಿಯಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net