ರಾಜ್ಯದಲ್ಲೇ ಸಾಕಷ್ಟು ಉತ್ಪಾದನೆ ಇದ್ರೂ ಆಕ್ಸಿಜನ್ ಕೊರತೆ ಆಗ್ತಿರೋದೇಕೆ? ಸರ್ಕಾರ ಎಡವಿದ್ದೆಲ್ಲಿ?

Oxygen
ಸಾಂದರ್ಭಿಕ ಚಿತ್ರ
Published on

ಕೊಪ್ಪಳ: ಕರೊನಾ ಸಂಕಷ್ಟ ಕಾಲದಲ್ಲಿ ಆಕ್ಸಿಜನ್​ ಪ್ರಾಮುಖ್ಯತೆ ಹೆಚ್ಚಿದೆ. ಆಮ್ಲಜನಕ ಕೊರತೆಯಿಂದಲೇ ಅನೇಕರು ಮೃತಪಡುತ್ತಿದ್ದು, ರಾಜ್ಯದಲ್ಲಿ ಆಕ್ಸಿಜನ್​ ಕೊರೆತೆಯ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ.

ಇದರ ನಡುವೆ ರಾಜ್ಯದಲ್ಲಿ ಆಕ್ಸಿಜನ್​ ಕೃತಕ‌‌ ಅಭಾವ ಕಾಡುತ್ತಿದ್ದೆಯೇ ಎಂಬ ಪ್ರಶ್ನೆ ಮೂಡಿದೆ. ರಾಜ್ಯದಲ್ಲೇ ಬರೋಬ್ಬರಿ 1110 ಟನ್ ಲಿಕ್ವಿಡ್ ಆಕ್ಸಿಜನ್ ಉತ್ಪಾದನೆ ಆಗ್ತಿದೆ. ಇಷ್ಟೊಂದು ಉತ್ಪಾದನೆ‌ ಇದ್ದರೂ ಆಕ್ಸಿಜನ್ ಕೊರತೆ‌ ಆಗ್ತಿರೋದೇಕೆ? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಾಗ ಅನೇಕ ಸಮಸ್ಯೆಗಳು ಎದುರಾಗಿವೆ.

ಪ್ರತಿದಿನ ಕೊಪ್ಪಳದ ಕಲ್ಯಾಣಿ ಕಾರ್ಖಾನೆಯಲ್ಲಿ‌ 110 ಮತ್ತು ಬಳ್ಳಾರಿಯ ಜಿಂದಾಲ್​ನಿಂದ 1 ಸಾವಿರ ಟನ್ ಲಿಕ್ವಿಡ್ ಆಕ್ಸಿಜನ್ ಉತ್ಪಾದನೆ. ಆಕ್ಸಿಜನ್ ಲಿಕ್ವಿಡ್‌ ಅನ್ನು ಮೆಡಿಕಲ್ ‌ಅಗತ್ಯಕ್ಕೆ ತಕ್ಕಂತೆ ಪರಿವರ್ತನೆ ಮಾಡುವುದೇ ದೊಡ್ಡ ಸವಾಲಾಗಿದೆ. ಆದ್ರೆ, ಸಂಗ್ರಹ ಮಾಡಲು ಸಿಲಿಂಡರ್ ಮತ್ತು ಟ್ಯಾಂಕರ್ ಕೊರತೆ ಇದೆ. ಈ ಕಾರಣಕ್ಕೆ ಅನಿವಾರ್ಯವಾಗಿ ಪ್ರಾಣವಾಯು ಹೊರ ರಾಜ್ಯಕ್ಕೆ ಹೋಗ್ತಿದೆ ಎಂದು ಹೇಳಲಾಗುತ್ತಿದೆ.

ಶೇ. 40ರಷ್ಟು ಲಿಕ್ವಿಡ್ ರೂಪದ ಆಕ್ಸಿಜನ್ ಹೊರ ರಾಜ್ಯದ ಪಾಲಾಗ್ತಿದೆ. ಕಳೆದ‌ ಒಂದು ವರ್ಷದಿಂದ ಸರ್ಕಾರ ಮಾಡಿದ್ದಾದರೂ ಏನು? ಕೈಯಲ್ಲಿ ಬೆಣ್ಣೆ ಇದ್ದರೂ ತುಪ್ಪಕ್ಕೆ ಪರದಾಡ್ತಿದೆಯಾ ರಾಜ್ಯ‌ ಸರ್ಕಾರ? ಎಂಬ ಪ್ರಶ್ನೆ ಮೂಡತೊಡಗಿದೆ. ಆಕ್ಸಿಜನ್ ಟ್ರಾನ್ಸಪೋರ್ಟ್ ಮಾಡಲು ಬೇಕಿರೋ ಸಿಲಿಂಡರ್ ಮತ್ತು ಟ್ಯಾಂಕರ್ ಇಲ್ಲದ್ದರಿಂದ ಸಮಸ್ಯೆ ಉದ್ಭವವಾಗಿದೆ. ಹೀಗಾಗಿ ಸರ್ಕಾರ ಆಕ್ಸಿಜನ್ ಟ್ಯಾಂಕರ್​ಗಳ ಸಂಖ್ಯೆಯನ್ನು ಹೆಚ್ಚಿಸಬೇಕಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net