

ಬೆಂಗಳೂರು: ಶವಸಂಸ್ಕಾರ ಮಾಡಲು ಸಹ ಉಳ್ಳವರ ಪ್ರಭಾವ ಬೇಕಾ ಎಂಬ ಪ್ರಶ್ನೆ ಮೂಡತೊಡಗಿದೆ.
ನಗರದ ಹರಿಶ್ಚಂದ್ರ ಘಾಟ್ ಮುಂದೆ ಸಾಕಷ್ಟು ಆಂಬ್ಯುಲೆನ್ಸ್ಗಳು ಹೆಣ ಹೊತ್ತು ಕ್ಯೂ ನಿಂತಿದ್ದು, ಗೇಟಿಗೆ ಬೀಗ ಹಾಕಿರುವ ಬಿಬಿಎಂಪಿ ಸಿಬ್ಬಂದಿ ವಾಹನಗಳನ್ನು ಒಳಗೆ ಬಿಡದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರಕ್ಕೂ ಪ್ರಭಾವ ಬೇಕಾ ಎಂಬ ಅನುಮಾನ ಮೂಡತೊಡಗಿದೆ.
ಇದೀಗ ಶವಸಂಸ್ಕಾರಕ್ಕೆ ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ಸ್ಥಳೀಯರು ಬಿಬಿಎಂಪಿ ಸಿಬ್ಬಂದಿ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ್ದಾರೆ. ಗೇಟ್ ತೆರೆದು ಸಂಸ್ಕಾರಕ್ಕೆ ಅನುಮತಿ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ.