ಸುಳ್ಳು ಮಾಹಿತಿ ನೀಡಿದ ಕಂದಾಯ ಅಧಿಕಾರಿಯನ್ನು ಅಮಾನತು ಮಾಡಿದ ಚಾಮರಾಜನಗರದ ಜಿಲ್ಲಾಧಿಕಾರಿ

Jayasheela
ಕಂದಾಯ ಅಧಿಕಾರಿ ಜಯಶೀಲ ಮತ್ತು ಜಿಲ್ಲಾಧಿಕಾರಿ ಚಾರುಲತಾ ಸೋಮಲ್
Published on

ಚಾಮರಾಜನಗರ: ಕರ್ತವ್ಯ ಲೋಪ ಆರೋಪ ಹಿನ್ನೆಲೆಯಲ್ಲಿ ಚಾಮರಾಜನಗರದ ನಗರಸಭಾ ಕಂದಾಯ ಅಧಿಕಾರಿಯನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ.

ಜಯಶೀಲ ಅಮಾನತಾದ ಅಧಿಕಾರಿ. ಸಾರ್ವಜನಿಕರಿಗೆ ಇ-ಆಸ್ತಿ ಮತ್ತು ಹಕ್ಕು ಬದಲಾವಣೆ ಸೇವೆ ವಿಳಂಬ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಯಶೀಲ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.

ದೂರಿನ ಮೇರೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತನಿಖೆ ನಡೆಸಿದ್ದರು. ಈ ವೇಳೆ 1192 ಅರ್ಜಿಗಳಿಗೆ ಸೇವೆ ನೀಡದೆ ಕರ್ತವ್ಯ ಲೋಪ ಎಸಗಿರುವ ಆರೋಪ ಸಾಬೀತಾಗಿದೆ.

ಸಕಾಲ ತಂತ್ರಾಂಶದಲ್ಲಿ ಸೇವೆ ನೀಡಲಾಗಿದೆ ಎಂದು ಆನ್​ಲೈನ್ ತಂತ್ರಾಂಶದಲ್ಲಿ ಸುಳ್ಳು ಮಾಹಿತಿ ನೀಡಿರುವುದು ತನಿಖೆಯಿಂದ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಜಯಶೀಲ ಅವರನ್ನು ಅಮಾನತು ಮಾಡಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net