ಪಲ್ಟಿಯಾದ ಕಾರು: ಗಾಯಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ನಟ ಅಜಯ್​ ರಾವ್

Ajay Rao
Published on

ವಿಜಯನಗರ: ಅಪಘಾತಕ್ಕೀಡಾದ ಗಾಯಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ನಟ ಅಜಯ್​ ರಾವ್​ ಮಾನವೀಯತೆ ಮೆರೆದಿದ್ದಾರೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಗ್ರಾಮದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮೈಸೂರಿನಿಂದ ಹೊಸಪೇಟೆಗೆ ಬರ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು.

ಇದೇ ಸಂದರ್ಭದಲ್ಲಿ ಹೊಸಪೇಟೆಯಿಂದ ಬೆಂಗಳೂರಿಗೆ ಹೊರಟಿದ್ದ ಅಜಯ್ ರಾವ್ ಕಾರು ಪಲ್ಟಿ ಆಗಿರುವುದನ್ನು ಹಾಗೂ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿರುವುದನ್ನು ಗಮನಿಸಿ ತಮ್ಮ ಕಾರಿನಲ್ಲಿದ್ದ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿದ್ದ ಮೆಡಿಕಲ್ ವಸ್ತುಗಳನ್ನು ಬಳಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಕಾನಾಹೊಸಳ್ಳಿಯ ರಾ.ಹೆ.50 ರ ಸಹಾಯಕರು ಹಾಗೂ ಪಿಎಸ್ಐ ಕೂಡ ಸಹಾಯಕ್ಕೆ ಧಾವಿಸಿದರು. ಅಜಯ್​ ರಾವ್​ ಮೂಲತಃ ಹೊಸಪೇಟೆಯವರಾಗಿದ್ದು, ಅವರ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net