ಬಿಜೆಪಿ ನಾಯಕ ರಾಘವೇಂದ್ರ ಶೆಟ್ಟಿ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೂರ್ತಿ ಸ್ಥಾಪನೆ

PM Modi
Published on

ಬೆಂಗಳೂರು: ಗೃಹ ಪ್ರವೇಶದ ಸಂದರ್ಭದಲ್ಲಿ ಮನೆಗಳಲ್ಲಿ ಇಷ್ಟಾರ್ಥ ದೇವರನ್ನು ಪ್ರತಿಷ್ಠಾಪಿಸುವುದು ನೋಡಿರುತ್ತೇವೆ. ಆದರೆ ಇಲ್ಲೊಬ್ಬರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೂರ್ತಿಯನ್ನು ಸ್ಥಾಪಿಸಿದ್ದಾರೆ.

ಹೌದು. ಮಹಾಲಕ್ಷ್ಮಿ ಬಡಾವಣೆ ಬಿಜೆಪಿ ಘಟಕದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿಂತಿರುವ ಮೂರ್ತಿ ಸ್ಥಾಪಿಸಿದ್ದಾರೆ. ನೂತನ ಮನೆಯ ಗೃಹ ಪ್ರವೇಶ ಸಮಾರಂಭದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಭಾಗವಹಿಸಿ ಶುಭ ಹಾರೈಸಿದರು.

ಈ ಬಗ್ಗೆ ಕೂ ಮಾಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮಹಾಲಕ್ಷ್ಮಿ ಬಡಾವಣೆ ಬಿಜೆಪಿ ಘಟಕದ ಅಧ್ಯಕ್ಷ ಶ್ರಿ ರಾಘವೇಂದ್ರ ಶೆಟ್ಟಿ ಅವರ ನೂತನ ಮನೆಯ ಗೃಹ ಪ್ರವೇಶ ಸಮಾರಂಭದಲ್ಲಿ ನಿನ್ನೆ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ಅವರ ಮನೆಯಲ್ಲಿ ಸ್ಥಾಪಿಸಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಪ್ರತಿಮೆ ವೀಕ್ಷಿಸಲಾಯಿತು ಎಂದಿದ್ದಾರೆ.

Koo App
ಮಹಾಲಕ್ಷ್ಮಿ ಬಡಾವಣೆ ಬಿಜೆಪಿ ಘಟಕದ ಅಧ್ಯಕ್ಷ ಶ್ರಿ ರಾಘವೇಂದ್ರ ಶೆಟ್ಟಿ ಅವರ ನೂತನ ಮನೆಯ ಗೃಹ ಪ್ರವೇಶ ಸಮಾರಂಭದಲ್ಲಿ ನಿನ್ನೆ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ಅವರ ಮನೆಯಲ್ಲಿ ಸ್ಥಾಪಿಸಿರುವ ಪ್ರಧಾನಿ ಶ್ರೀ @narendramodi ಅವರ ಪ್ರತಿಮೆ ವೀಕ್ಷಿಸಲಾಯಿತು. @BJP4Karnataka
View attached media content
-Araga Jnanendra (@aragajnanendra)11 June 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net