

ಮಂಡ್ಯ: ಬಿಜೆಪಿ ಮುಖಂಡ ಜಗನ್ನಾಥ್ ಶೆಟ್ಟಿ ಹನಿಟ್ರ್ಯಾಪ್ ಪ್ರಕರಣವು ಮತ್ತೊಂದು ತಿರುವು ಪಡೆದುಕೊಂಡಿದೆ. ಶೆಟ್ಟಿ ಕೊಟ್ಟ ದೂರಿನಲ್ಲಿರುವ ಮಾಹಿತಿ ಮತ್ತು ವೈರಲ್ ಆಗಿರುವ ವಿಡಿಯೋದಲ್ಲಿರುವ ಮಾಹಿತಿಯು ಸುಳ್ಳು ಎಂಬುದು ತಿಳಿದುಬಂದಿದ್ದು, ದಿಗ್ವಿಜಯ ನ್ಯೂಸ್ಗೆ ಪೊಲೀಸ್ ಉನ್ನತ ಮೂಲಗಳು ಪಕ್ಕಾ ಮಾಹಿತಿಯನ್ನು ನೀಡಿದೆ.
ಹನಿಟ್ರ್ಯಾಪ್ ಬಲೆಗೆ ಶೆಟ್ಟಿಯನ್ನು ಕೆಡವಲು ಹಲವು ದಿನಗಳಿಂದ ಪ್ಲ್ಯಾನ್ ನಡೆದಿತ್ತು. ಜತೆಯಲ್ಲಿದ್ದ ಯವತಿ ಮೂಲಕ ಸಲ್ಮಾ ಭಾನು ಮತ್ತು ತಂಡ ಖೆಡ್ಡಾ ತೋಡಿದ್ದರು. ಫೋನ್ ಮೂಲಕ ಶೆಟ್ಟಿಯವರನ್ನು ಯುವತಿ ಪರಿಚಯಿಸಿಕೊಂಡಿದ್ದಳು. ಶೆಟ್ಟಿಗೆ ಮೊದಲ ಬಾರಿಗೆ ಕರೆ ಮಾಡಿದಾಗ ಪರಿಚಯವೇ ಇಲ್ಲದಂತೆ ಯುವತಿ ವರ್ತಿಸಿದ್ದಳು. ಇತ್ತ ಶೆಟ್ಟಿ ತಾನೊಬ್ಬ ಲೆಕ್ಚರ್ ಎಂದು ಹೇಳಿಕೊಂಡಿದ್ದರು. ಶೆಟ್ಟಿ ಸುಳ್ಳನ್ನೇ ಸಲ್ಮಾಭಾನು ಮತ್ತು ಗ್ಯಾಂಗ್ ಬಂಡವಾಳ ಮಾಡಿಕೊಂಡಿತು.
ನಾಜೂಕಾಗಿ ಮಾತನಾಡುತ್ತಲೇ ಮುಗ್ಧ ಯುವತಿಯಂತೆ ಯುವತಿ ಫೋನ್ ಕಾಲ್ನಲ್ಲಿ ನಟಿಸಿದ್ದಳು. ಸಲುಗೆ ಬೆಳೆಯುತ್ತಿದ್ದಂತೆ ಶೆಟ್ಟಿ, ಯುವತಿಯನ್ನು ಲಾಡ್ಜ್ ಕರೆದಿದ್ದರು. ಇದಾದ ಬಳಿಕ ಶೆಟ್ಟಿಯವರನ್ನು ಲಾಕ್ ಮಾಡಲು ಮತ್ತೆ ಪ್ಲ್ಯಾನ್ ನಡೆಯಿತು. ಯುವತಿ ರೂಮಿಗೆ ಹೋದ ಕೆಲವೇ ಕ್ಷಣಗಳಲ್ಲಿ ಸಲ್ಮಾ ಮತ್ತು ತಂಡ ಲಾಡ್ಜ್ ಮೇಲೆ ದಾಳಿ ಮಾಡಿತು.
ಯುವತಿ ಚಿಕ್ಕಪ್ಪ ಎಂದು ಹೇಳಿಕೊಂಡು ಹೆದರಿಸಿ, ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ವಿಡಿಯೋದಲ್ಲಿ ಶೆಟ್ಟಿ ಒಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಮಾಸ್ಕ್ ಧರಿಸಿ ಹೈಡ್ರಾಮ ಸೃಷ್ಟಿ ಮಾಡಿದ್ದಾರೆ. ವಿಡಿಯೋ ರೆಕಾರ್ಡ್ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟರು. ಮರ್ಯಾದೆಗೆ ಹೆದರಿ ಲಕ್ಷ ಲಕ್ಷ ರೂಪಾಯಿ ಹಣಕೊಟ್ಟರು ಮತ್ತೆ ಹಣಕ್ಕೆ ನೀಡುವಂತೆ ಗ್ಯಾಂಗ್ ಹಾವಳಿ ಕೊಟ್ಟಿತ್ತು.
ಖತರ್ನಾಕ್ ಗ್ಯಾಂಗ್ ಕಾಟ ನಿಲ್ಲದಿದ್ದಾಗ ಶೆಟ್ಟಿ ಪೊಲೀಸರ ಮೊರೆ ಹೋದರು. ಫೆಬ್ರವರಿ 26ರಂದು ನಡೆದ ಘಟನೆ ಬಗ್ಗೆ ಆಗಸ್ಟ್ 19ರಂದು ದೂರು ದಾಖಲಿಸಿದರು. ಮರ್ಯಾದೆಗೆ ಅಂಜಿ ಅಪಹರಣ ಮತ್ತು ಬೆದರಿಕೆ ದೂರು ನೀಡಿದರು ಎಂದು ದಿಗ್ವಿಜಯ ನ್ಯೂಸ್ಗೆ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಶೆಟ್ಟಿಯವರನ್ನು ಲಾಡ್ಜ್ಗೆ ಕರೆಸಿಕೊಂಡಿದ್ದು ಸಹೋದರನ ಮಗಳು ಎಂಬುದು ಶುದ್ಧ ಸುಳ್ಳು. ಚಿಕ್ಕಪ್ಪ... ಚಿಕ್ಕಪ್ಪ... ಅಂತ ಶೆಟ್ರು ಮುಂದೆ ಯುವತಿ ಡ್ರಾಮ ಮಾಡಿದ್ದಳು. ಯುವತಿಗೆ ಹೊಡೆದು, ಗದರಿಸಿ ಶೆಟ್ಟಿಗೆ ನಂಬಿಕೆ ಬರುವಂತೆ ಹೈಡ್ರಾಮ ನಡೆದಿತ್ತು. ವಿಡಿಯೋದಲ್ಲಿ ಅವನ್ಯಾರು? ಇಲ್ಲಿಗೆ ಏಕೆ ಬಂದೆ? ಹೇಳು ಎಂದು ಚಿಕ್ಕಪ್ಪ ಎಂದೇಳಿಕೊಂಡವನಿಂದ ಯುವತಿಯನ್ನು ಕೇಳಿದ್ದ. ಅವರು ನಮ್ಮ ಲೆಚ್ಚರ್, ಅವರಿಗೆ ಏನೂ ಮಾಡಬೇಡಿ ಎಂದು ಯುವತಿ ನಟಿಸಿದ್ದಳು. ಹೊಡೆಯಲು ಮುಂದಾದಾಗ ತಡೆಯುವಂತೆ ಮಾಡಿ ಜಗನ್ನಾಥ್ ಶೆಟ್ಟಿಗೆ ತನ್ನ ಮೇಲೆ ಅನುಕಂಪ ಬರುವಂತೆ ಯುವತಿ ಡ್ರಾಮ ಮಾಡಿದ್ದಳು. ನಿಜಕ್ಕೂ ಯುವತಿಯ ಚಿಕ್ಕಪ್ಪನೇ ಬಂದಿದ್ದಾನೆಂದು ನಂಬಿ ಶೆಟ್ಟಿ ಅವರು ಹಣ ನೀಡಿದ್ದರು. (ದಿಗ್ವಿಜಯ ನ್ಯೂಸ್)