ಹೂತಿದ್ದ ಶವದ ಬಾಯಿಗೆ ಪೈಪ್ ಮೂಲಕ ನೀರುಣಿಸಿದ ಗ್ರಾಮಸ್ಥರು! ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ

Strange Custom
Published on

ವಿಜಯಪುರ: ಮಳೆ ಬರಲಿ ಅಂತಾ ಏನೇನೋ ವಿಚಿತ್ರ ಆಚರಣೆಗಳನ್ನು ಮಾಡುವುದು ಹಲವೆಡೆ ಇನ್ನೂ ಪ್ರಚಲಿತದಲ್ಲಿವೆ. ಈಗಾಗಲೇ ಮಳೆಗಾಗಿ ಗುರ್ಜಿ ಪೂಜೆ, ಗುಳ್ಳವನ ಆಚರಣೆ, ಕತ್ತೆಗಳ ಮದುವೆ, ಕಪ್ಪೆಗಳ ಮದುವೆ, ಅರೆಬೆತ್ತಲೆ ಪೂಜೆ ಸೇರಿದಂತೆ ಹೋಮ-ಹವನ ಮಾಡೋದನ್ನು ನೋಡಿದ್ದೀರಿ, ಆದರೆ ಶವದ ಬಾಯಿಗೆ ನೀರುಣಿಸಿದ್ದು ಎಲ್ಲಾದರೂ ಕೇಳಿದ್ದೀರಾ ಅಥವಾ ಕಂಡಿದ್ದೀರಾ?

ಅಚ್ಚರಿಯಾದರೂ ಅಂಥದ್ದೊಂದು ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿರುವುದು ಅಕ್ಷರಶಃ ಸತ್ಯ. ಇಲ್ಲಿ ಮಳೆಗಾಗಿ ವಿಚಿತ್ರ ಆಚರಣೆ ಮಾಡಿದ್ದಾರೆ. ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಗೋರಿಯಲ್ಲಿ ಹೂತಿದ್ದ ಶವದ ಬಾಯಿಗೆ ಪೈಪ್ ಮೂಲಕ ನೀರು ಹಾಕಿ ಮಳೆಗಾಗಿ ಆಚರಣೆ ಮಾಡಿದ್ದಾರೆ.

ಇನ್ನೂ ಜಿಲ್ಲೆಯಲ್ಲಿ ಮಳೆಯಾಗದ ಕಾರಣ ರೈತಾಪಿ ವರ್ಗ ಆತಂಕಗೊಂಡಿದ್ದಾರೆ. ಅದಕ್ಕಾಗಿ ಶವದ ಬಾಯಿಗೆ ನೀರು ಹಾಕಿದರೆ ಮಳೆ ಬರುತ್ತೇ ಅನ್ನೋ ನಂಬಿಕೆ ಗ್ರಾಮಸ್ಥರಲ್ಲಿ ಇದೆ. ಹೀಗಾಗಿ ಗೋರಿಯಲ್ಲಿದ್ದ ಶವದ ಬಾಯಿಗೆ ಟ್ಯಾಂಕರ್ ಮೂಲಕ ನೀರು ತಂದು ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net