ಸಿಲಿಕಾನ್ ಸಿಟಿಯಲ್ಲಿ ಮತ್ತೆ ಉಗಾಂಡ ಪ್ರಜೆಗಳ ಪುಂಡಾಟ: ಅಂಗಾಂಗ ತೋರಿಸಿ ವಿಕೃತಿ ಮೆರೆದ ಮಹಿಳೆಯರು

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಉಗಾಂಡ ಪ್ರಜೆಗಳ ಪುಂಡಾಟ: ಅಂಗಾಂಗ ತೋರಿಸಿ ವಿಕೃತಿ  #Bengaluru #UgandaPeoplesUproar - youtube
Published on

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಉಗಾಂಡ ಪ್ರಜೆಗಳ ಪುಂಡಾಟ ಮುಂದುವರಿದಿದೆ. ಕ್ಯಾಬ್ ಚಾಲಕನಿಗೆ ಚಪ್ಪಲಿಯಿಂದ ಥಳಿಸಿ ಹಲ್ಲೆ ಮಾಡಿರುವುದಲ್ಲದೆ, ಅಂಗಾಂಗ ತೋರಿಸಿ ಉಗಾಂಡ ಮಹಿಳೆಯರು ವಿಕೃತಿ ಮೆರೆದಿದ್ದಾರೆ.

ರಾಜಾಜಿನಗರದ ನಗರದ ಖಾಸಗಿ ಹೋಟೆಲ್ ಆವರಣದಲ್ಲಿ ಶನಿವಾರ (ಸೆ.18) ರಾತ್ರಿ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕಾಲೇಜು ಕಾರ್ಯಕ್ರಮ ನಿಮಿತ್ತ ಉಗಾಂಡ ಪ್ರಜೆಗಳು ಹೋಟೆಲ್​ಗೆ ಬಂದಿದ್ದರು. ಕಾರ್ಯಕ್ರಮ ಮುಗಿಸಿ ಹೊರಡುವಾಗ ಓಲಾ ಕ್ಯಾಬ್ ಬುಕ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ಕ್ಯಾಬ್ ಚಾಲಕ ಓಟಿಪಿ ಪಡೆದಿದ್ದಾನೆ. ನಂತರ ನಾಲ್ವರನ್ನು ಕೂರಿಸಿಕೊಂಡಿದ್ದಾನೆ.

ಹೊರಡುವಷ್ಟರಲ್ಲಿ ಮತ್ತೊಬ್ಬ ಬಂದು ಕ್ಯಾಬ್ ಹತ್ತಲು ಮುಂದಾಗಿದ್ದಾನೆ. ಈ ವೇಳೆ ಕ್ಯಾಬ್ ಹತ್ತಲು ಚಾಲಕ ನಿರಾಕರಿಸಿದ್ದಾನೆ. ಐವರನ್ನು ಕರೆದುಕೊಂಡು ಹೋಗಲು ಆಗೋದಿಲ್ಲ ಎಂದಿದ್ದಾನೆ. ನಾಲ್ಕು ಜನರಾದರೆ ಮಾತ್ರ ಬನ್ನಿ ಎಂದಿದ್ದಾನೆ. ಬಳಿಕ ಎಲ್ಲರು ಕ್ಯಾಬ್​ನಿಂದ ಕೆಳಗೆ ಇಳಿದಿದ್ದಾರೆ. ಈ ವೇಳೆ 100 ರೂಪಾಯಿ ಟ್ರಿಪ್ ಕ್ಯಾನ್ಸಲೇಷನ್ ಚಾರ್ಜ್ ಕೇಳಿದ್ದಾನೆ. ಇಷ್ಟಕ್ಕೆ ಹೋಟೆಲ್ ಆವರಣದಲ್ಲಿ ಗಲಾಟೆ ಶುರುವಾಗಿದೆ.

ಈ ವೇಳೆ ಜಗಳ ತಾರಕಕ್ಕೇರಿ ಕ್ಯಾಬ್ ಚಾಲಕನಿಗೆ ಉಗಾಂಡ ಪ್ರಜೆಗಳು ಹಲ್ಲೆ ಮಾಡಿದ್ದಾರೆನ್ನಲಾಗಿದೆ. ಚಪ್ಪಲಿಯಿಂದ ಉಗಾಂಡ ಮಹಿಳೆಯರು ಥಳಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಅಲ್ಲದೆ ಅಂಗಾಂಗ ತೋರಿಸಿ ಮುಜುಗರ ಉಂಟು ಮಾಡಿದ್ದಾರೆ. ಘಟನೆ ಸಂಬಂಧ ಸುಬ್ರಮಣ್ಯನಗರ ಠಾಣೆಯಲ್ಲಿ ಚಾಲಕ ಸಾಗರ್​ ದೂರು ದಾಖಲಿಸಿದ್ದಾರೆ. ದೂರು ಸಂಬಂಧ ಉಗಾಂಡಾ ಪ್ರಜೆ ರೇಮಂಡ್ ಲುಬೆಗಾ ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಖಾಕಿ, ಸದ್ಯ ಆತನನ್ನು ಬಿಟ್ಟುಕಳಿಸಿದ್ದು ಮತ್ತೆ ಠಾಣೆಗೆ ಬರುವಂತೆ ಸೂಚನೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net