ಕಾರಿನ ಗಾಜು ಒಡೆದು 1 ಕೋಟಿ 22 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಖತರ್ನಾಕ್​ ದಂಪತಿ ಬಂಧನ

Couple
Published on

ಬೆಂಗಳೂರು: ನಗರದ ತಲಘಟ್ಟಪುರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಓಜಿಕುಪ್ಪಂ ಗ್ಯಾಂಗ್​ನ ದಂಪತಿಯನ್ನು ಬಂಧಿಸಿದ್ದಾರೆ.

ಬಂಧಿತ ದಂಪತಿಯನ್ನು ರತ್ನಕುಮಾರ್ ಅಲಿಯಾಸ್​ ರೆಡ್ಡಿ ಹಾಗೂ ಫಾತಿಮಾ ಅಲಿಯಾಸ್​ ತನು ಎಂದು ಗುರುತಿಸಲಾಗಿದೆ. ಬಂಧಿತರಿಂದ 1 ಕೋಟಿ 22 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ವ್ಯಕ್ತಿಯೊಬ್ಬರು ರಘುವಿನಹಳ್ಳಿಯಲ್ಲಿರುವ ಲಾಕರ್​ನಲ್ಲಿ ಚಿನ್ನಾಭರಣವನ್ನು ಬಿಡಿಸಿಕೊಂಡು ಕಾರಿನಲ್ಲಿಟ್ಟಿಕೊಂಡು ಬರುತ್ತಿದ್ದರು. ಕಾರಿನಲ್ಲಿ ಸುಮಾರು ಒಂದು ಕೆಜಿ 170ಗ್ರಾಂ ಚಿನ್ನಾಭರಣ ಹಾಗು 186 ಗ್ರಾಂ ವಜ್ರದ ಆಭರಣವ ಇತ್ತು. ಕಾರು ನಿಲ್ಲಿಸಿ ನರ್ಸರಿಗೆ ಹೋಗಿ ಬರುವಷ್ಟರಲ್ಲಿ ಆರೋಪಿ ದಂಪತಿ ಎಲ್ಲವನ್ನೂ ದೋಚಿದ್ದರು.

ಕಾರಿನ ಗಾಜು ಒಡೆದು ಆಭರಣವನ್ನು ದೋಚಿದ್ದ ಆರೋಪಿಗಳು ಬಳಿಕ ಆಭರಣದ ಜತೆಗೆ ತಮಿಳುನಾಡಿಗೆ ಎಸ್ಕೇಪ್ ಆಗಿದ್ದರು. ಈ ಸಂಬಂಧ ಸಂತ್ರಸ್ತ ತಲಘಟ್ಟಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿ ದಂಪತಿಯನ್ನು ಬಂಧಿಸಲಾಗಿದೆ.

ಅಂದಹಾಗೆ ಆರೋಪಿಗಳು 2015 ರಿಂದಲೂ ಈ ಕೃತ್ಯದಲ್ಲಿ ಸಕ್ರೀಯರಾಗಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳ ಮೇಲೆ 26 ಪ್ರಕರಣಗಳು ದಾಖಲಾಗಿದ್ದು, ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net