ವಿವೇಕಾನಂದ ಕಲಾಕೇಂದ್ರ ಏರ್ಪಡಿಸಿದ್ದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ

Tiranga
Published on

ಬೆಂಗಳೂರು: ವಿವೇಕಾನಂದ ಕಲಾಕೇಂದ್ರ ಏರ್ಪಡಿಸಿದ್ದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಬಿಬಿಎಂಪಿ ಜಂಟಿ ಆಯುಕ್ತೆ ಶ್ರೀಮತಿ ಪಿ.ವಿ. ಪೂರ್ಣಿಮಾ ಅವರು ಚಾಲನೆ ನೀಡಿ, ಶಾಲಾ ಮಕ್ಕಳಿಗೆ ರಾಷ್ಟ್ರಧ್ವಜ ವಿತರಿಸಿದರು.

ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ರಾಷ್ಟ್ರೀಯ ಲಾಂಛನಗಳನ್ನು ಗೌರವಿಸುವ ಬಗ್ಗೆ ನಿವೃತ್ತ ಸೇನಾಯೋಧರಾದ ಶ್ರೀ ಗೋವಿಂದರಾಜು ಮತ್ತು ಶ್ರೀ ಕೆ. ಜಯರಾಮ್ ಅವರು ವಿವರಣೆ ನೀಡಿದರು.

ಕಲಾಕೇಂದ್ರದ ಡಾ. ವಿ ನಾಗರಾಜ್, ಡಾ. ಶ್ವೇತ, ಶಂಕರ್.ಎಸ್‌.ಎನ್ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಟ್ಟು ಭಾಗವಹಿಸಿದ್ದರು.

ಮಾ. ದೈವಿಕ್ ನೇತೃತ್ವದ ಶಾಲಾ ಮಕ್ಕಳ ತಂಡ ವಂದೇ ಮಾತರಂ ಎಂಬ ನೃತ್ಯರೂಪಕ ಮಾಡಿ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟ್ಟಗಳನ್ನು ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net