ಆಹಾರ ಸುರಕ್ಷತೆಯಲ್ಲಿ 5 ಸ್ಟಾರ್ ಪಡೆದ ಮೈಸೂರು, ಬೆಂಗಳೂರು ರೈಲ್ವೆ ನಿಲ್ದಾಣ

BNG Mys
Published on

ಬೆಂಗಳೂರು/ಮೈಸೂರು: ಸೌತ್ ವೆಸ್ಟರ್ನ್ ರೈಲ್ವೆಯ ಮೈಸೂರು ರೈಲು ನಿಲ್ದಾಣ ಮತ್ತು ಬೆಂಗಳೂರು ನಿಲ್ದಾಣವು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದುಕೊಂಡಿದ್ದು, ಉತ್ತಮ ರೇಟಿಂಗ್ ಪಡೆದುಕೊಂಡಿದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಆಹಾರ ಸುರಕ್ಷತೆ ಮಟ್ಟದಲ್ಲಿ ಸೌತ್ ವೆಸ್ಟರ್ನ್ ರೈಲ್ವೆಯ ಮೈಸೂರು ರೈಲು ನಿಲ್ದಾಣ ಮತ್ತು ಬೆಂಗಳೂರು ನಿಲ್ದಾಣಕ್ಕೆ 5 ಸ್ಟಾರ್ ರೇಟಿಂಗ್‌ ನೀಡುವುದರ ಮೂಲಕ 'ಈಟ್ ರೈಟ್ ಸ್ಟೇಷನ್' ಎಂದು ಪ್ರಮಾಣೀಕರಿಸಿದೆ.

ಈ ಕುರಿತು ರೈಲ್ವೆ ಸಚಿವಾಲಯ ಕೂ ಮಾಡಿದ್ದು, ಸೌತ್ ವೆಸ್ಟರ್ನ್ ರೈಲ್ವೆಯ ಮೈಸೂರು ರೈಲು ನಿಲ್ದಾಣ ಮತ್ತು ಕೆಎಸ್ಆರ್ ಬೆಂಗಳೂರು ನಿಲ್ದಾಣವು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ 5 ಸ್ಟಾರ್ ರೇಟಿಂಗ್‌ನೊಂದಿಗೆ 'ಈಟ್ ರೈಟ್ ಸ್ಟೇಷನ್' ಎಂದು ಪ್ರಮಾಣೀಕರಿಸಿದೆ ಎಂದು ಹೇಳಿದೆ.

Koo App
Only the best for our Passengers! Mysuru Railway Station & KSR Bengaluru Station of @southwesternrailway have been certified as ’Eat Right Station’ with a 5 star rating by Food Safety & Standards Authority of India.
View attached media content
-Ministry of Railways (@RailMinIndia)26 July 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net