ಒಂದೇ ಕುಟುಂಬದ ಐವರು ಸಾವು ಪ್ರಕರಣ: ಭಾನುವಾರ ನಡೆದ ಇಂಚಿಂಚು ಘಟನೆ ಬಿಚ್ಚಿಟ್ಟ ಕುಟುಂಬದ ಯಜಮಾನ!

Suicide
Published on

ಬೆಂಗಳೂರು: ಒಂಬತ್ತು ತಿಂಗಳ ಗಂಡುಮಗುವನ್ನು ಕೊಂದು ಒಂದೇ ಕುಟುಂಬದ ನಾಲ್ವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಶಂಕರ್​ ಎಂಬುವರು ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಶಂಕರ್, ಉಲ್ಲೇಖಿಸಿರುವ ಮಾಹಿತಿ ದಿಗ್ವಿಜಯ ನ್ಯೂಸ್​ಗೆ ಲಭ್ಯವಾಗಿದೆ. ನನ್ನ ಆಸ್ತಿ, ಹಣ ಎಲ್ಲವನ್ನು ಹೆಂಡತಿ ಹಾಗೂ ಮಗನಿಗೆ ನೀಡಿ ಬಿಟ್ಟಿದ್ದೆ. ನನಗೆ ಹಣ ಬೇಕಾದಾಗ ಅವರನ್ನೇ ಕೇಳಿ ಪಡೆಯಬೇಕಾಗಿತ್ತು ಎಂದಿದ್ದಾರೆ.

ಭಾನುವಾರದ ಜಗಳಕ್ಕೆ ಕಾರಣವಾದ ಅಂಶವನ್ನು ಕೂಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಶಂಕರ್​ ಈ ಹಿಂದಿನಿಂದಲೂ ಪತ್ನಿ ಮತ್ತು ಮಗನ ಜತೆ ಭಿನ್ನಾಭಿಪ್ರಾಯ ಹೊಂದಿದ್ದರು. ಹೆಂಡತಿ‌ ಜತೆಗೆ ಹೆಣ್ಣುಮಕ್ಕಳ ವಿಚಾರವಾಗಿ ಭಿನ್ನಾಭಿಪ್ರಾಯ ಹೊಂದಿದ್ದರು. ಹೆಣ್ಣು ಮಕ್ಕಳನ್ನು ಗಂಡನ ಮನೆಗೆ ಕಳುಹಿಸುವಂತೆ ಶಂಕರ್ ಒತ್ತಾಯಿಸಿದ್ದರು. ಆದರೆ, ಕಳಿಸುವುದಿಲ್ಲ ಎಂದು ಶಂಕರ್ ಜತೆ ಪತ್ನಿ ಭಾರತಿ ಜಗಳಕ್ಕಿಳಿದಿದ್ದರು. ಹೆಣ್ಣು ಮಕ್ಕಳ ಜೀವನ ಹಾಳು ಮಾಡ್ತಿದಿಯಾ ಎಂದು ಶಂಕರ್​ ಪತ್ನಿ ವಿರುದ್ಧ ಕೆಂಡವಾಗಿದ್ದರಂತೆ.

ಹಣದ ವ್ಯವಹಾರದ ವಿಚಾರವಾಗಿ ಮಗನ ಜತೆಗೆ ಕೂಡ ಭಿನ್ನಾಭಿಪ್ರಾಯ ಹೊಂದಿದ್ದರಂತೆ. ಮಗ ಬಾರ್ ಓಪನ್ ಮಾಡಲು 20 ಲಕ್ಷ ಕೊಟ್ಟು ರಿಜಿಸ್ಟರ್ ಮಾಡಿಸಲು ರೆಡಿ ಮಾಡಿಕೊಂಡಿದ್ದ. ಆದರೆ, ರಿಜಿಸ್ಟರ್ ಮಾಡಲು ಶಂಕರ್ ಸಹಿ ಬೇಕಾಗಿತ್ತು. ಆದರೆ ಸಹಿ ಮಾಡಲು ಶಂಕರ್ ನಿರಾಕರಿಸಿದ್ದ. ಈ ವಿಚಾರವಾಗಿ ಕೂಡ ಭಾನುವಾರ ಮನೆಯಲ್ಲಿ ಜಗಳ ನಡೆದಿತ್ತು ಎಂದು ಉಲ್ಲೇಖಿಸಿದ್ದಾರೆ.

ಆಶ್ರಮ ಕಟ್ಟಿಸಲು 10 ಲಕ್ಷ ರೂ. ಹಣವನ್ನು ಶಂಕರ್​, ಹೆಂಡತಿ ಮಕ್ಕಳಿಗೆ ಕೇಳಿದ್ದ. ಈ ವೇಳೆ ಹಣ ನೀಡೋದಕ್ಕೆ ಪತ್ನಿ ಮತ್ತು ಮಗ ನಿರಾಕರಿಸಿದ್ದಾರೆ. ಭಾನುವಾರದ ಜಗಳವಾಗಲು ಈ ವಿಚಾರ ಕೂಡ ಕಾರಣವಾಗಿದೆ. ತುಂಬಾ ಜಗಳ ಮಾಡಿಕೊಂಡು ಶಂಕರ್​ ಮನೆಬಿಟ್ಟುಹೋಗಿದ್ದ. ಸಂಜೆ 4.30ಕ್ಕೆ ತಂದೆ ಶಂಕರ್​ ಮಗ ಮಧುಸಾಗರ್ ವಾಟ್ಸ್ಆ್ಯಪ್‌ ಮೆಸೆಜ್ ಮಾಡಿದ್ದ. 10 ಲಕ್ಷ ರೂ. ನೀಡುತ್ತೇನೆ ಮನೆಗೆ ಬಾ ಅಪ್ಪಾ ಎಂದು ಮೆಜೆಸ್ ಮಾಡಿದ್ದ. ಆದರೆ, ಇದಕ್ಕೆ ಶಂಕರ್​ ಯಾವುದೇ ರೆಸ್ಪಾನ್ಸ್ ನೀಡಿರಲಿಲ್ಲ.

ಸೆ. 16 ನೇ ತಾರೀಖು ಶಂಕರ್​ ಮನೆ ಬಳಿ ಬಂದಿದ್ದ. ಮನೆಯಲ್ಲಿ ಯಾರು ಇಲ್ಲದಿರೋದನ್ನ ಗಮನಿಸಿದ್ದಾನೆ. ಎಲ್ಲಾದರು ಹೋಗಿರಬಹುದು ಅಂದುಕೊಂಡು ಸ್ನೇಹಿತನ ಮನೆಯಲ್ಲಿ‌ ಉಳಿದುಕೊಂಡಿದ್ದ. ನಿನ್ನೆ ಸಂಜೆ ಮನೆ ಬಳಿ ಮತ್ತೆ ಬಂದು ನೋಡಿದಾಗ ಮಗುವನ್ನು ಕೊಂದು ಉಳಿದವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net