ಬೆಂಗ್ಳೂರಲ್ಲಿ ನಿಗೂಢ ಪ್ರಕರಣ: ಆತ್ಮಗಳ ಜತೆ ಮಾತನಾಡ್ತೇನೆಂದು ಬಾಲಕಿಯ ವಿಚಿತ್ರ ವರ್ತನೆ, ದಿಢೀರ್​ ನಾಪತ್ತೆ!

Minor Girl
Published on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ. ಆತ್ಮಗಳ ಜತೆ ಮಾತನಾಡುತ್ತೇನೆಂದು ವಿಚಿತ್ರವಾಗಿ ವರ್ತಿಸುತ್ತಿರುವ ಅಪ್ರಾಪ್ತ ಬಾಲಕಿ ಇದೀಗ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದಾಳೆ.

ಬೆಂಗಳೂರಿನ ಸುಬ್ರಮಣ್ಯನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಾಲಕಿಯ ವರ್ತನೆ ಕಂಡು ಪಾಲಕರು ತಬ್ಬಿಬ್ಬಾಗಿದ್ದಾರೆ. ಅಲ್ಲದೆ, ಮನೆಯಲ್ಲಿದ್ದ 2500 ರೂಪಾಯಿ ಮತ್ತು ಎರಡು ಜೊತೆ ಬಟ್ಟೆ ತೆಗೆದುಕೊಂಡು ಬಾಲಕಿ ಪರಾರಿ ಆಗಿದ್ದಾಳೆ.

ಮಗಳ ಅನಿರೀಕ್ಷಿತ ವರ್ತನೆ ಕಂಡು ಪಾಲಕರು ಕಂಗಾಲಾಗಿದ್ದು, ಮಗಳನ್ನು ಸಹಜ ಸ್ಥಿತಿಗೆ ತರುವ ಪ್ರಯತ್ನದಲ್ಲಿರುವಾಗಲೇ ಆಕೆ ನಾಪತ್ತೆಯಾಗಿರುವುದು ಪಾಲಕರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಗಾಗಿ ಪೊಲೀಸರಿಂದ ಶೋಧಕಾರ್ಯ ನಡೆದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net