

ಬೆಂಗಳೂರು: ಪ್ರೇಯಸಿಗಾಗಿ ಮೊಬೈಲ್ ಕಳ್ಳತನ ಮಾಡಿದ್ದ ಆರೋಪಿಯನ್ನು ಜೆ.ಪಿ.ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ಮುನಾಫ್ ಬಂಧಿತ ಆರೋಪಿ. ಜುಲೈ 22 ರಂದು ಜೆಪಿ ನಗರದ ಕ್ರೋಮಾ ಮೊಬೈಲ್ ಸ್ಟೋರ್ನಲ್ಲಿ ಮುನಾಫ್, ಕಳ್ಳತನ ಮಾಡಿದ್ದ. ಸಂಜೆ ಟೈಮಲ್ಲಿ ಮೊಬೈಲ್ ಶಾಪ್ಗೆ ಗ್ರಾಹಕನಂತೆ ಹೋಗಿದ್ದ ಆರೋಪಿ ಮುನಾಫ್, ಮೊಬೈಲ್ ಪರಿಶೀಲನೆ ಮಾಡುವ ನೆಪದಲ್ಲಿ ವಾಶ್ ರೂಮ್ಗೆ ಹೋಗಿದ್ದ. ಸ್ಟೋರ್ ಕ್ಲೋಸ್ ಆಗುವವರೆಗೂ ಒಳಗಡೆಯೇ ಇದ್ದ.
ಸ್ಟೋರ್ ಕ್ಲೋಸ್ ಆಗ್ತಿದ್ದಂತೆ ಲಕ್ಷ ಲಕ್ಷ ಬೆಲೆಬಾಳುವ ಮೊಬೈಲ್ಗಳನ್ನು ಎಗರಿಸಿದ್ದ. ಬೆಳಗ್ಗೆ ಸ್ಟೋರ್ ರೀ ಓಪನ್ ಮಾಡುವವರೆಗೂ ಅಂಗಡಿಯಲ್ಲೇ ಇದ್ದ. ಶಾಪ್ ಓಪನ್ ಮಾಡ್ತಿದ್ದಂತೆ ಮತ್ತೊಂದು ಬಾಗಿಲಿನಿಂದ ಆರೋಪಿ ಎಸ್ಕೇಪ್ ಆಗಿದ್ದ. ಸದ್ಯ ಆರೋಪಿ ಅಬ್ದುಲ್ ಮುನಾಫ್ನನ್ನ ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 5 ಲಕ್ಷ ರೂ. ಮೌಲ್ಯದ 6 ಮೊಬೈಲ್ ವಶಕ್ಕೆ ಪಡೆಯಲಾಗಿದೆ. (ದಿಗ್ವಿಜಯ ನ್ಯೂಸ್)