ತಾಯಿಗೆ ಪಂಗನಾಮ ಹಾಕಿದ ಮಗಳು: ಮಾಡಬಾರದ್ದನ್ನು ಮಾಡಿ ಎಸ್ಕೇಪ್​ ಆದವಳಿಗಾಗಿ ಪೊಲೀಸರ ಹುಡುಕಾಟ

Woman
Published on

ಬೆಂಗಳೂರು: ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ವಂಚಿಸಿದ ಆರೋಪದ ಮೇಲೆ ತಾಯಿಯೇ ಮಗಳ ಮೇಲೆ ದೂರು ದಾಖಲಿಸಿರುವ ಘಟನೆ ಜೆಪಿ ನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಾಲ್ಕು ಕೋಟಿ ಮೌಲ್ಯದ ಏಳೂವರೆ ಕೆಜಿ ವಜ್ರ ಹಾಗೂ ಚಿನ್ನಾಭರಣ ವಂಚಿಸಿದ್ದಾಳೆ ಎಂದು ಮಗಳ ವಿರುದ್ಧವೇ ತಾಯಿ ದೂರು ನೀಡಿದ್ದು, ಜೆಪಿನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ವಿಜಯಲಕ್ಷ್ಮಿ ಎಂಬುವರು ಮಗಳು ತೇಜವಂತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿಜಯಲಕ್ಷ್ಮಿ ಅವರು ಕೆಲ ದಿನಗಳ ಹಿಂದೆ ಅಪರೇಶನ್​ಗೆ ಒಳಗಾಗಿದ್ದರು. ಈ ವೇಳೆ ಮನೆಗೆ ಬಂದಿದ್ದ ತೇಜವಂತಿ ಲಾಕರ್​ನಲ್ಲಿ ಸುರಕ್ಷಿತವಾಗಿ ಇಡುವುದಾಗಿ ಹೇಳಿ ಚಿನ್ನ ತೆಗೆದುಕೊಂಡು ಹೋಗಿದ್ದಳು. ಆದ್ರೆ ಚಿನ್ನ ತೆಗೆದುಕೊಂಡು ಹೋದ ನಂತರ ತೇಜವಂತಿ ನಾಪತ್ತೆಯಾಗಿದ್ದಾಳೆ.

ಈ ಕುರಿತು ವಿಜಯಲಕ್ಷ್ಮಿ ಅವರು ಜೆ ಪಿ‌ನಗರ ಠಾಣೆಗೆ ದೂರು ನೀಡಿದ್ದಾರೆ. ಭಾರತೀಯ ದಂಡಸಂಹಿತೆಯ ಸೆಕ್ಷನ್​ 420ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದು, ತೇಜವಂತೆ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net