ಬಹುಮಹಡಿ ಕಟ್ಟಡದಿಂದ ಕೆಳಗೆ ಬಿದ್ದು ಉಗಾಂಡ ಮೂಲದ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

Gitam VV
Published on

ಬೆಂಗಳೂರು: ಬಹುಮಹಡಿ ಕಟ್ಟಡದಿಂದ ಕೆಳಗೆ ಬಿದ್ದು ಉಗಾಂಡ ಮೂಲದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಬಳಿಯಿರುವ ಗೀತಂ ಯೂನಿವರ್ಸಿಟಿಯಲ್ಲಿ ನಿನ್ನೆ (ಏ.27) ರಾತ್ರಿ ನಡೆದಿದೆ.

ಹಸೀನಾ (24) ಮೃತ ದುರ್ದೈವಿ. ಗೀತಂ ಯೂನಿವರ್ಸಿಟಿಯ ಮಹಡಿ ಮೇಲಿಂದ ಬಿದ್ದು ಅನುಮಾನಾಸ್ಪಾದ ರೀತಿಯಲ್ಲಿ ಮೃತಪಟ್ಟಿದ್ದಾಳೆ. ಹಸೀನಾ, ಗೀತಂ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದಳು. ರಾತ್ರಿ 11 ಗಂಟೆ ಸುಮಾರಿಗೆ 6 ನೇ ಮಹಡಿಯಿಂದ ಮೊದಲ ಮಹಡಿಗೆ ಬಿದ್ದು ಮೃತಪಟ್ಟಿದ್ದಾಳೆ. ಕೆಳಗಡೆ ಬಿದ್ದಾಗ ಇನ್ನೂ ಉಸಿರಾಡುತ್ತಿದ್ದಳು. ಆದರೆ, ಆಸ್ವತ್ರೆಗೆ ಸಾಗಿಸುವ ಮಧ್ಯೆ ಹಸೀನಾ ಕೊನೆಯುಸಿರೆಳೆದಿದ್ದಾಳೆ.

ವಿದ್ಯಾರ್ಥಿಗಳ ಆಕ್ರೋಶ

ಬಹು ಮಹಡಿಯಿಂದ ಬಿದ್ದು ಹಸೀನಾ ಮೃತಪಟ್ಟ ಹಿನ್ನೆಲೆಯಲ್ಲಿ ಗೀತಂ ವಿವಿಯಲ್ಲಿ ವಿದ್ಯಾರ್ಥಿಗಳು ಆಕ್ರೋಶಿತರಾಗಿದ್ದಾರೆ. ಕಲ್ಲು ಮತ್ತು ಸಿಕ್ಕ ಸಿಕ್ಕ ವಸ್ತುಗಳಿಂದ ಹೊಡೆದು ಕಾಲೇಜಿನ ಗ್ಲಾಸ್​ಗಳನ್ನು ಪುಡಿ ಪುಡಿ ಮಾಡಿದ್ದಾರೆ. ಕಾಲೇಜು ಮತ್ತು ಹಾಸ್ಟೇಲ್​ನ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಗೀತಂ ಯುನಿವರ್ಸಿಟಿಯಲ್ಲಿ ಮೊಕಂ ಹೂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net