ತಾನೋರ್ವ ACP ಎಂದು ನಂಬಿಸಿ 20 ಲಕ್ಷ ರೂ. ವಂಚಿಸಿದ ಇನ್ಸ್​ಪೆಕ್ಟರ್​ ಪುತ್ರನಿಗಾಗಿ ಕೆಂಗೇರಿ ಪೊಲೀಸರ ಹುಡುಕಾಟ

Kengeri Police
Published on

ಬೆಂಗಳೂರು: ತಾನೋರ್ವ ಸಹಾಯಕ ಪೊಲೀಸ್​ ಕಮಿಷನರ್​ (ಎಸಿಪಿ) ಎಂದು ಹೇಳಿಕೊಂಡು, ವ್ಯಕ್ತಿಯೊಬ್ಬರನ್ನು ನಂಬಿಸಿ, ಅವರಿಂದ ಲಕ್ಷಾಂತರ ರೂಪಾಯಿ ವಂಚಿಸಿದ ಖತರ್ನಾಕ್​ ಅಸಾಮಿಗಾಗಿ ಕೆಂಗೇರಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ನವೀನ್, ಬಂಧಿತ ಆರೋಪಿ. ಶಂಕರಪ್ಪ ಎಂಬುವರಿಗೆ ಸುಮಾರು 20 ಲಕ್ಷ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಹುಂಡೈ ಶೋ ರೂಂನಲ್ಲಿ ಕಾರ್ ಸರ್ವೀಸ್​ಗೆ ಬಂದಿದ್ದ ನವೀನ್, ತಾನೊರ್ವ ಜಯನಗರ ಎಸಿಪಿ ಎಂದು ಹೇಳಿಕೊಂಡು ಶಂಕರಪ್ಪನನ್ನು ಪರಿಚಯಿಸಿಕೊಂಡಿದ್ದ.

ಪರಿಚಯದ ಬಳಿಕ ಶಂಕರಪ್ಪನಿಗೆ ಕಾರು ನೀಡುವುದಾಗಿ ನಂಬಿಸಿ, ಬೇರೆ ಬೇರೆ ಅವಶ್ಯಕತೆಗಳಿಗೆ ಹಣ ತೆಗೆದುಕೊಂಡು ಇದೀಗ ವಂಚನೆ ಮಾಡಿದ್ದಾನೆ. ಆರೋಪಿ ನವೀನ್​, ಹಾವೇರಿ ಜಿಲ್ಲೆಯ ಇನ್ಸ್​ಪೆಕ್ಟರ್ ಒಬ್ಬರ ಮಗನೆಂದು ತಿಳಿದುಬಂದಿದೆ.

ಸದ್ಯ ಶಂಕರಪ್ಪ ಅವರು ನವೀನ್​ ವಿರುದ್ಧ ಕೆಂಗೇರಿ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ನಕಲಿ ಎಸಿಪಿ ನವೀನ್​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net