ಬೆಂಗ್ಳೂರಲ್ಲಿ ಡೆಡ್ಲಿ ಕಾರು ಅಪಘಾತ: ಮದುವೆಯಾಗೋ ಹುಡುಗಿಯ ಜತೆ ಶಾಸಕನ ಪುತ್ರನ ಭೀಕರ ಸಾವು

karunakara
Published on

ಬೆಂಗಳೂರು: ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ತಡರಾತ್ರಿ 1.30ರ ಸುಮಾರಿಗೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ 7 ಮಂದಿ ದಾರುಣವಾಗಿ ಮೃತಪಟ್ಟಿದ್ದು, ಮೃತರಲ್ಲಿ ಕರುಣಾಸಾಗರ್ ಎಂಬಾತ ತಮಿಳುನಾಡು ಡಿಎಂಕೆ ಶಾಸಕನ ಪುತ್ರ ಎಂದು ತಿಳಿದುಬಂದಿದೆ. ದುರಂತವೆಂದರೆ, ಮದುವೆ ಆಗಬೇಕಿದ್ದ ಯುವತಿಯ ಜತೆಯಲ್ಲೇ ಕರುಣಾಸಾಗರ್​ ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

ಮೃತ ಕರುಣಸಾಗರ್ ತಮಿಳುನಾಡಿನ ಹೊಸೂರು ಕ್ಷೇತ್ರದ ಡಿಎಂಕೆ ಶಾಸಕ ವೈ ಪ್ರಕಾಶ್​ ಅವರ ಪುತ್ರ. ನಿನ್ನೆ ಸಂಜೆ ಕಟ್ಟಡದ ಸಾಮಾಗ್ರಿಗಳನ್ನು ಖರೀದಿಸಲು ಕರುಣಾಸಾಗರ್​ ಬೆಂಗಳೂರಿಗೆ ಆಡಿ ಕ್ಯೂ 3 ಕಾರಿನಲ್ಲಿ ಬಂದಿದ್ದ. ರಾತ್ರಿ ಫ್ರೆಂಡ್ಸ್ ಜೊತೆ ಕಾರಿನಲ್ಲಿ ಹೋಗುವಾಗ ನಿಯಂತ್ರಣ ತಪ್ಪಿದ ಕಾರು ಫುಟ್ ಪಾತ್ ಮೇಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 7 ಮಂದಿಯು ದುರಂತ ಅಂತ್ಯ ಕಂಡಿದ್ದಾರೆ. ಮೃತಪಟ್ಟವರಲ್ಲಿ ಮೂವರು ಮಹಿಳೆಯರು ಹಾಗೂ ನಾಲ್ಕು ಪುರುಷರಾಗಿದ್ದಾರೆ.

ಕರುಣಾಸಾಗರ್​ ಹಾಗೂ ಮೃತ ಬಿಂದು ಇಬ್ಬರು ಪ್ರೀತಿ ಮಾಡ್ತಿದ್ರು. ಸದ್ಯದಲ್ಲೇ ಇಬ್ಬರಿಗೂ ಮದುವೆ ಮಾಡಲು ಕರುಣಾಸಾಗರ್ ಕುಟುಂಬಸ್ಥರು ಮುಂದಾಗಿತ್ತು. ನಿನ್ನೆ ಕಟ್ಟಡದ ಸಾಮಾಗ್ರಿಗಳ ಖರೀದಿಗೆ ಬಂದಿದ್ದ ಕುರುಣಾಸಾಗರ್, ತನ್ನ ಪ್ರೀಯತಮೆ ಬಿಂದುಳನ್ನು ಭೇಟಿಯಾಗಿದ್ದ. ಬಳಿಕ ರಾತ್ರಿ ಸ್ನೇಹಿತರೆಲ್ಲರು ಆಡಿ ಕಾರಿನಲ್ಲಿ ಹೋಗ್ತಿದ್ರು. ಈ ವೇಳೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕರುಣಾಸಾಗರ್ ಮತ್ತು ಬಿಂದು ಹಾಗೂ ನಾಲ್ವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮತ್ತೊಬ್ಬ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಕರುಣಾಸಾಗರ್ ಇಂಗ್ಲೆಂಡ್​ನಲ್ಲಿ ವ್ಯಾಸಂಗ ಮಾಡಿದ್ದು, ಐದು ವರ್ಷದ ಹಿಂದೆ ಮರಳಿ ತವರಿಗೆ ಬಂದಿದ್ದ. ಪಾಲಕರು ಕರುಣಾಸಾಗರ್​ಗೆ ಪ್ಯಾಕೇಜಿಂಗ್ ಇಂಡಸ್ಟ್ರಿ ನಿರ್ಮಾಣ ಮಾಡಿಕೊಟ್ಟಿದ್ದರು. ಬ್ಯಾಳಗೊಂಡಹಳ್ಳಿಯಲ್ಲಿ ಕಂಪನಿ ನಡೆಸುತ್ತಿದ್ದ. ಈತ ವೈ. ಪ್ರಕಾಶ್ ಅವರ ಒಬ್ಬನೇ ಪುತ್ರ ಕರುಣಾ ಸಾಗರ್.

ಉಳಿದ ಮೃತರನ್ನು ಇಶಿತಾ (21), ಡಾ.ಧನುಶಾ (21) ಅಕ್ಷಯ್ ಗೋಯಲ್, ಉತ್ಸವ್ ಮತ್ತು ರೋಹಿತ್ (23) ಎಂದು ಗುರುತಿಸಲಾಗಿದೆ. ಕಾರಿನ ಮುಂಬದಿ ಸೀಟಿನಲ್ಲಿ ಮೂವರು ಹಾಗೂ ಹಿಂಬದಿಯಲ್ಲಿ ನಾಲ್ವರು ಕುಳಿತಿದ್ದರು‌. ಎಲ್ಲರೂ ಕೂಡ 25-30ರ ವಯೋಮಾನದವರು ಮತ್ತು ಸ್ನೇಹಿತರು. ಮೃತ ಅಕ್ಷಯ್ ಗೋಯಲ್ ಕೇರಳಾ ಮೂಲದವನು, ಉತ್ಸವ್ (ಹರ್ಯಾಣ), ರೋಹಿತ್ (ಹುಬ್ಬಳ್ಳಿ), ಕರುಣಾ ಸಾಗರ್ (ಹೊಸೂರು) ಹಾಗೂ ಉಳಿದವರು ಕೋರಮಂಗಲದ ಜೋಲೋ ಸ್ಟ ಪಿಜಿಯಲ್ಲಿ ವಾಸವಿದ್ರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net