ಆಗಸ್ಟ್​ 15ರ ಸ್ವಾತಂತ್ರ್ಯೋತ್ಸವದಂದು ರಾಜ್ಯದ ಜನತೆಗೆ ಕಾದಿದೆ ಸಿಎಂ ಬೊಮ್ಮಾಯಿ ಅವರ ಬಿಗ್​ ಸರ್ಪ್ರೈಸ್​!

Bommai
Published on

ಬೆಂಗಳೂರು: ಆಗಸ್ಟ್​ 15ರ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದಂದು ರಾಜ್ಯದ ಜನತೆಗೆ ನೂತನ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಅವರು ಸರ್ಪ್ರೈಸ್​ ನೀಡಲು ಕಾದಿದ್ದಾರೆ. ಹೀಗಂತಾ ಬೊಮ್ಮಾಯಿ ಸಂಪುಟದ ಸಚಿವರೊಬ್ಬರು ಮಾಹಿತಿ ನೀಡಿದ್ದಾರೆ.

ಹೌದು, ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಸತಿ ಸಚಿವ ವಿ. ಸೋಮಣ್ಣ ಅವರು ಸೂರು ಇಲ್ಲದವರಿಗೆ ಸೂರು ಕಲ್ಪಿಸುವ ಯೋಜನೆಯು ಸೇರಿದಂತೆ ಆಗಸ್ಟ್​ 15ಕ್ಕೆ ಮಹತ್ವದ ಯೋಜನೆಗಳು ಘೋಷಣೆ ಆಗಲಿವೆ. ಯಾರೂ ಯೋಚನೆ ಮಾಡದ ರೀತಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ಸಿಎಂ ಬೊಮ್ಮಾಯಿ ಅವರು ಘೋಷಣೆ ಮಾಡಲಿದ್ದಾರೆ. ಹಾಗೆಯೇ ಅದಕ್ಕೆ ಹಣಕಾಸನ್ನು ಸಹ ಬಿಡುಗಡೆ ಮಾಡಲಿದ್ದಾರೆ ಎಂದರು.

ಆಗಸ್ಟ್​ 15ರ ಬಳಿಕ 15 ರಿಂದ 20 ದಿವಸದಲ್ಲಿ ಸರ್ಕಾರ ಟೇಕಫ್ ಆಗಿದೆ ಎಂಬ ಭಾವನೆ ನಿಮಗೆ ಬರುತ್ತದೆ ಎನ್ನುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯಂದು ಹೊಸ ಯೋಜನೆ ಘೋಷಣೆ ಬಗ್ಗೆ ಸೋಮಣ್ಣ ಅವರು ಸುಳಿವು ನೀಡಿದರು.

ಖಾತೆ ವಿಚಾರದಲ್ಲಿ ಯಾರಿಗೂ ಅಸಮಾಧಾನ ಇಲ್ಲ. ಬಸವರಾಜ ಬೊಮ್ಮಾಯಿ ಬುದ್ಧಿವಂತರಿದ್ದಾರೆ. ತಮ್ಮ ಕರ್ತವ್ಯ ನಿರ್ವಹಣೆ ಮಾಡ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಒಳ್ಳೆಯ ಕೆಲಸ ಮಾಡ್ತಿದೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net