41ರ ಉದ್ಯಮಿ ಪತಿಯ ಕೊಲೆಗೆ 26ರ ಪತ್ನಿಯಿಂದಲೇ ಸುಪಾರಿ: ಪೊಲೀಸ್​ ತನಿಖೆಯಲ್ಲಿ ಸ್ಫೋಟಕ ರಹಸ್ಯ ಬಯಲು

Wife Supari
Published on

ಬೆಳಗಾವಿ: ಮಾರ್ಚ್​ 15ರಂದು ಬೆಳಗಾವಿಯ ಮಂಡೋಳಿ ರಸ್ತೆಯಲ್ಲಿ ನಡೆದಿದ್ದ ಉದ್ಯಮಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಉದ್ಯಮಿ ಕೊಲೆಗೆ ಉದ್ಯಮದ ಪಾಲುದಾರರು ಮತ್ತು ಎರಡನೇ ಪತ್ನಿ ಸುಪಾರಿ ಕೊಟ್ಟಿದ್ದರು ಎಂಬ ಭಯಾಬಕ ಅಂಶ ಬಯಲಾಗಿದೆ.

ರಾಜು ದೊಡ್ಡಬೊಮ್ಮನವರ್ (41) ಕೊಲೆಯಾದ ಉದ್ಯಮಿ. ಮಂಡೋಳಿ ರಸ್ತಯಲ್ಲಿ ಕಣ್ಣಿಗೆ ಕಾರದ ಪುಡಿ ಎರಚಿ ಚಾಕು ಇರಿದು ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಇದೀಗ ಪ್ರಮುಖ ಮೂರು ಆರೋಪಿಗಳು ಬಂಧಿಸಲಾಗಿದೆ. ಬಂಧಿತರನ್ನು ಶಶಿಕಾಂತ್ ಶಂಕರಗೌಡ, ಧರ್ಮೇಂದ್ರ ಘಂಟಿ ಹಾಗೂ ಎರಡನೇ ಪತ್ನಿ ಕಿರಣ ದೊಡ್ಡಬೊಮ್ಮನವರ್ (26) ಎಂದು ಗುರುತಿಸಲಾಗಿದೆ.

ಮೊದಲ ಮದುವೆಯನ್ನು ಮುಚ್ಚಿಟ್ಟು ಕಿರಣ ಜತಗೆ ಕೊಲೆಯಾದ ರಾಜು ಎರಡನೇ ವಿವಾಹವಾಗಿದ್ದ. ಆದರೆ, ಉದ್ಯಮದಲ್ಲಿ ಬಂದಂತಹ ಲಾಭವನ್ನು ಹೆಂಡತಿಗೆ ಹಾಗೂ ಪಾಲುದಾರರ ಜತೆ ರಾಜು ಹಂಚಿಕೊಳ್ಳುತ್ತಿರಲಿಲ್ಲ ಎಂಬ ಆರೋಪವಿದೆ. ಹೀಗಾಗಿ ರಾಜು ಹಾಗೂ ಪಾಲುದಾರರ ನಡುವೆ ವೈಮನಸ್ಸು ಶುರುವಾಗಿತ್ತು. ಇದರಿಂದ ಮೂರು ಜನ ಸೇರಿ ರಾಜು ಕೊಲೆ ಮಾಡಲು 10 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ರಾಜು ಕೊಲೆಯಾದ ದಿನ ಅಂತ್ಯಕ್ರಿಯಲ್ಲಿ ಭಾಗವಹಿಸುವ ಮೂಲಕ ತಾನೇನು ಮಾಡೇ ಇಲ್ಲ ಎಂಬಂತೆ ಕಿರಣ ನಟಿಸಿದ್ದಳು.

ಅಧಿಕೃತವಾಗಿ ಮೂರು ಜನರನ್ನು ರಾಜು ಮದುವೆಯಾಗಿದ್ದ. ಇದರಲ್ಲಿ ಎರಡನೇ ಪತ್ನಿ ಕಿರಣ ಎಂಬಾಕೆ ಸುಪಾರಿ ನೀಡಿದ್ದಳು. ಸದ್ಯ ಕಿರಣ ಸೇರಿ ಮೂರು ಜನರ ಬಂಧಿಸಲಾಗಿದೆ. ಉಳಿದ ಕೊಲೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸರಿಂದ ತನಿಖೆ ಮುಂದುವರಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net