ಬಳ್ಳಾರಿ ಲೇಡಿ ಕಮಿಷನರ್ ನಡೆಗೆ ಅಧಿಕಾರಿಗಳಲ್ಲಿ ನಡುಕ: ಸಾರ್ವಜನಿಕರಿಂದ ಮೆಚ್ಚುಗೆ

Preethi Gehlot
Published on

ಬಳ್ಳಾರಿ: ಆಡಳಿತಕ್ಕೆ ಚುರುಕು ಮುಟ್ಟಿಸುವ ಉದ್ದೇಶದಿಂದ ಬಳ್ಳಾರಿ‌ ಮಹಾನಗರ ಪಾಲಿಕೆಗೆ ಮೇಜರ್ ಸರ್ಜರಿ ಮಾಡಲು ಲೇಡಿ ಕಮಿಷನರ್ ಮುಂದಾಗಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಬಳ್ಳಾರಿ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್​ ಅವರು ದಿಟ್ಟ ನಡೆ ಅನುಸರಿದ್ದು, ಒಂದೇ ಬಾರಿಗೆ 60 ಅಧಿಕಾರಿಗಳು‌ ಹಾಗು ನೌಕರರನ್ನು ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ತುಕ್ಕು ಹಿಡಿದಿರುವ ಆಡಳಿತಕ್ಕೆ ಮೇಜರ್​ ಸರ್ಜರಿ ಮಾಡಲು ಪ್ರೀತಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಐದರಿಂದ ಹತ್ತು ವರ್ಷದವರೆಗೂ ಒಂದೇ ಕಡೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಶಿಫಾರಸ್ಸು ಮಾಡಿದ್ದು, ಒಂದೇ ಸ್ಥಳದಲ್ಲಿ ಬೀಡು ಬಿಟ್ಟಿರುವ ಪಾಲಿಕೆ ಅಧಿಕಾರಿಗಳ ಎದೆಯಲ್ಲಿ ಈಗಾಗಲೇ ತಳಮಳ ಶುರುವಾಗಿದೆ. ಲೇಡಿ ಕಮಿಷನರ್ ನಡೆಗೆ ಅಧಿಕಾರಿಗಳಲ್ಲಿ ನಡುಕ ಉಂಟಾಗಿದ್ದರೆ, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ವರ್ಗಾವಣೆ ಮಾಡಿ ಅಂತಾ ನಗರಾಭಿವೃದ್ದಿ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಪ್ರೀತಿ ಅವರು ಪತ್ರ ಬರೆದು ವರ್ಗಾವಣೆಗೆ ಶಿಫಾರಸ್ಸು ಮಾಡಿದ್ದಾರೆ. ರಾಜ್ಯದ ಎಲ್ಲ ಕಡೆ ಇದೀ ನಿಯಮ ಅಳವಡಿಸಿಕೊಂಡರೆ ಆಡಳಿತದಲ್ಲಿ ಒಂದಿಷ್ಟು ಬದಲಾವಣೆ ಕಾಣಬಹುದು ಎಂಬುದು ಜನರ ನಂಬಿಕೆಯಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net