ಭೀಕರ ಅಪಘಾತ: ಸೇತುವೆಯ ತಡಗೋಡೆ ಮೇಲೆ ನೇತಾಡಿದ ಕಾರು, ಕೃಷ್ಣಾ ನದಿ ಪಾಲಾಗುವುದರಿಂದ ಪಾರು!

Car
Published on

ಬಾಗಲಕೋಟೆ: ಅಪಘಾತಕ್ಕೀಡಾದ ಕಾರು ಸಿನಿಮೀಯ ರೀತಿಯಲ್ಲಿ ಸೇತುವೆಯ ತಡಗೋಡೆಯ ಮೇಲೆ ನೇತಾಡುತ್ತಿರುವ ದೃಶ್ಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸೇತುವೆ ಮೇಲೆ ಕಂಡುಬಂದಿತು.

ವೇಗವಾಗಿ ಬಂದು ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಚಿಕ್ಕಪಡಸಲಗಿ ಸೇತುವೆಯ ತಡೆಗೋಡೆ ಗುದ್ದಿ ಅದರ ಮೇಲೆಯೇ ನೇತಾಡಿದೆ. ಸ್ವಲದರಲ್ಲೇ ಕೃಷ್ಣಾ ನದಿ ಪಾಲಾಗುವ ಭಾರೀ ಅಪಾಯದಿಂದ ಚಾಲಕ ಮತ್ತು ಪ್ರಯಾಣಿಕರು ಪಾರಾಗಿದ್ದಾರೆ.

ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸೇತುವೆ ಮೇಲೆ ಗುರುವಾರ ತಡರಾತ್ರಿ ಘಟನೆ ನಡೆದಿದೆ. ಅಪಘಾತ ಬಳಿಕ ಚಾಲಕ ನಾಪತ್ತೆಯಾಗಿದ್ದು, ವಾಹನ ಯಾರದ್ದು? ಎಷ್ಟು ಜನ ಇದ್ದರು ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net