

ಕೊಪ್ಪಳ: ಬಿ.ವೈ.ವಿಜಯೇಂದ್ರ ಅವರು ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿ ಆಗ್ತಾರೆ ಎಂದು ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಹೇಳಿದರು.
ಕೊಪ್ಪಳದಲ್ಲಿ ಮಾತನಾಡಿದ ಅವರು ವಿಜಯೇಂದ್ರ ಅವರ ತಾಕತ್ತು, ಶಕ್ತಿ ಏನು ಅನ್ನೋದನ್ನು ನಾನು ಹತ್ತಿರದಿಂದ ನೋಡಿದ್ದೇನೆ. ನಾನು ಅವರ ಜೊತೆ ಪಕ್ಷ ಸಂಘಟನೆ ಮಾಡಿದ್ದೇನೆ. ಎಲ್ಲಿ ಪಕ್ಷ ಗೆಲ್ಲೋದಿಲ್ಲ ಎಂದು ಹೇಳಲಾಗುತ್ತಿತ್ತೂ ಅಲ್ಲಿ ಕ್ಷೇತ್ರದಲ್ಲೇ ಅವರು ಹೂ ಅರಳಿಸಿದ್ದಾರೆ. ಅವರನ್ನ ತುಳಿಯೋ ಶಕ್ತಿ ಯಾರಿಗೂ ಇಲ್ಲ. ಅಂತವರು ಭೂಮಿ ಮೇಲೆಯೇ ಹುಟ್ಟಿಲ್ಲ ಎಂದರು.
ವಿಜಯೇಂದ್ರ ಅವರನ್ನು ತುಳಿಯೋ ಕೆಲಸ ಬಿಜೆಪಿ ಮಾಡಲ್ಲ. ಮುಂದೆ ಒಂದು ದಿನ ಅವರು ಮುಖ್ಯಮಂತ್ರಿ ಆಗೋ ಶಕ್ತಿ ಇದೆ. ಬಿಜೆಪಿ ಪಕ್ಷದಲ್ಲಿಯೇ ಅವರು ಮುಖ್ಯಮಂತ್ರಿ ಆಗ್ತಾರೆ ಎಂದು ಹೇಳಿದರು. ಅವರಲ್ಲಿನ ತಾಕತ್ತು ನೋಡಿ ನಾನು ಅವರಿಗೆ ಮುಖ್ಯಮಂತ್ರಿ ಆಗೋ ಯೋಗ ಬರುತ್ತೆ ಎಂದಿದ್ದೇನೆ ಎಂದರು.
ನಾನು ಕುಷ್ಟಗಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ಲ. ಕುಷ್ಟಗಿಯಲ್ಲಿ ನಮ್ಮ ನಾಯಕ ದೊಡ್ಡನಗೌಡರು ಇದ್ದಾರೆ. ದೇಶ ವಿಂಗಡನೆ ಮಾಡೋಕೆ ಆರ್ಎಸ್ಎಸ್ ಹುಟ್ಟಿರುವುದು ಎಂಬ ಶಾಸಕ ಅಮರೇಗೌಡ ಹೇಳಿಕೆಗೆ ಶರಣು ತಳ್ಳಿಕೇರಿ ತಿರುಗೇಟು ನೀಡಿದರು. ಒಂದು ನಿರ್ಧಿಷ್ಟ ಸಮುದಾಯದ ಒಲೈಕೆಗಾಗಿ ಅಮರೇಗೌಡ ಮಾತಾಡ್ತಾರೆ ಎಂದು ಟೀಕಿಸಿದರು. (ದಿಗ್ವಿಜಯ ನ್ಯೂಸ್)