ಕೇಂದ್ರ ಸರ್ಕಾರ ನೀಡಿದ ಅನುದಾನಕ್ಕೆ ರಾಜ್ಯ ಸರ್ಕಾರ ಲೆಕ್ಕ ಕೊಡಲಿ : ಆರ್. ಅಶೋಕ್ ಆಗ್ರಹ

ASHOKA (1)
Published on

ಮೈಸೂರು: ರಾಜ್ಯಕ್ಕೆ ಕೇಂದ್ರ ಸರ್ಕಾರ ನಿರೀಕ್ಷೆಗೂ ಮೀರಿ ಅನುದಾನ ನೀಡಿದ್ದು, ಅನುದಾನ ಬಳಕೆ ಬಗ್ಗೆ ಮೊದಲು ರಾಜ್ಯ ಸರ್ಕಾರ ಲೆಕ್ಕ ನೀಡಲಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದರು.

ಕೇಂದ್ರದಿಂದ ರಾಷ್ಟ್ರೀಯ ಹೆದ್ದಾರಿ, ಜಲಜೀವನ್ ಮಿಷನ್, 15ನೇ ಹಣಕಾಸು ಯೋಜನೆ, ನರೇಗ ಯೋಜನೆಯಡಿ ರಾಜ್ಯಕ್ಕೆ ಕೋಟ್ಯಾಂತರ ರೂ.ಅನುದಾನ ನೀಡಲಾಗಿದೆ. ರಾಜ್ಯಕ್ಕೆ ಬಂದಿರುವ ಅನುದಾನವನ್ನು ಯಾವ ರೀತಿ ಬಳಕೆ ಮಾಡಲಾಗಿದೆ ಎಂಬ ಬಗ್ಗೆ ರಾಜ್ಯ ಸಕ್ರಾ ಮೊದಲು ಜನರಿಗೆ ತಿಳಿಸಲಿ ಎಂದು ಸವಾಲು ಹಾಕಿದರು.

ನರೇಂದ್ರ ಮೋದಿ ಸರ್ಕಾರದ 11 ವರ್ಷದ ಆಡಳಿತಾವಧಿಯಲ್ಲಿ ದೇಶದ ಜನರ ತಲಾ ಆದಾಯದಲ್ಲಿ ಭಾರಿ ಹೆಚ್ಚಳ ಕಂಡಿದೆ. ಪ್ರಧಾನಿ ಮನಮೋಹನ್ ಸಿಂಗ್ ಅವಧಿಯಲ್ಲಿ ತಲಾ ಆದಾಯ 6 ಸಾವಿರ ರೂ. ಇತ್ತು, ಇದೀಗ 20 ಸಾವಿರ ರೂ.ಕ್ಕೆ ಏರಿಕೆಯಾಗಿದೆ. ಭಾರತ ಈಗ ಮಹತ್ವದ ಘಟಕ್ಕೆ ಹೋಗುತ್ತಿರುವ ಪರ್ವ ಕಾಲದಲ್ಲಿ ಇದೆ ಎಂದರು.

ಮನಮೋಹನ್ ಸಿಂಗ್ ಅವರ 10 ವರ್ಷದ ಅವಧಿ ಮತ್ತು ನರೇಂದ್ರ ಮೋದಿ ಅವರ 11 ವರ್ಷದ ಆಡಳಿತ ನೋಡಿದರೆ ದೇಶ ಮೂರ‌್ನಾಲ್ಕು ಪಟ್ಟು ಅಭಿವೃದ್ಧಿ ಸಾಧಿಸಿದೆ. ಉದ್ಯೋಗ ಸೃಷ್ಟಿ ಮುಂತಾದ ವಿಷಯದಲ್ಲಿ ಮುನ್ನಡೆ ಸಾಧಿಸಿದೆ. ಆರ್ಥಿಕ ಬೆಳವಣಿಗೆಯಲ್ಲಿ ಈ ಹಿಂದೆ ಹತ್ತು ಮತ್ತು ಹನ್ನೊಂದನೇ ಸ್ಥಾನಕ್ಕೆ ಭಾರತ ಹೋರಾಟ ನಡೆಸಬೇಕಿತ್ತು. ಆದರೆ ಈಗ ಜಪಾನ್‌ಅನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನದಲ್ಲಿದೆ. ಕೆಲವೇ ವರ್ಷಗಳಲ್ಲಿ ಮೊದಲ ಸ್ಥಾನಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net