ಅಮೆರಿಕ ವಧು-ವಿಜಯಪುರ ವರನ ಅದ್ಧೂರಿ ಮದುವೆ: ಇಬ್ಬರೂ ಜತೆಯಾಗಿದ್ದು ಹೇಗೆ ಗೊತ್ತಾ?

Canada Bride
Published on

ವಿಜಯಪುರ: ಗುಮ್ಮಟನಗರಿ ವಿಜಯಪುರ ಅಪರೂಪದ ಮದುವೆಗೆ ಸಾಕ್ಷಿಯಾಗಿದೆ. ಅಮೆರಿಕ ವಧು ಹಾಗೂ ವಿಜಯಪುರದ ವರನ ನಡುವೆ ಅದ್ಧೂರಿ ವಿವಾಹ ನೆರವೇರಿದೆ. ಈ ಅಪರೂಪದ ಪ್ರೇಮ ವಿವಾಹದ ಕಂಪ್ಲೀಟ್​ ಸ್ಟೋರಿ ಇಲ್ಲಿದೆ.

ಉತ್ತರ ಅಮೆರಿಕದ ಕೆನಡಾ ದೇಶದ ಸಾರಾ ಹಾಗೂ ವಿಜಯಪುರ ನಿವಾಸಿ ರವಿಕುಮಾರ್ ಚಿಮ್ಮಲಗಿ ಶಾಸ್ತ್ರೋಕ್ತವಾಗಿ ಮದುವೆ ಆಗಿದ್ದಾರೆ. ವಿಜಯಪುರ ನಗರದಲ್ಲಿನ ಹೊಟೆಲ್ ಟೌನ್ ಪ್ಯಾಲೇಸ್​ನಲ್ಲಿ ಅದ್ದೂರಿ ಮದುವೆ ನಡೆದಿದೆ.

ಕೆನಡಾದ ಸಾಫ್ಟವೇರ್ ಕಂಪನಿಯಲ್ಲಿ ಸಾರಾ ಹಾಗೂ ರವಿಕುಮಾರ್ ಕೆಲಸ ಮಾಡುತ್ತಿದ್ದರು. ರವಿಕುಮಾರ್ ವಿಜಯಪುರದ ವಿಶ್ವನಾಥ ಚಿಮ್ಮಲಗಿ ಹಾಗೂ ಶೋಭಾ ದಂಪತಿಗಳ ಪುತ್ರ. ಸಾರಾ ಕೆನಡಾದ ರೋಜ್ಮೇರಿ ಪ್ಲಾಟ್ ಹಾಗೂ ಹ್ಯಾರಿ ಪೋಲಾರ್ಡ್ ದಂಪತಿಯ ಪುತ್ರಿ.

ರವಿಕುಮಾರ್ ಹಲವು ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದಾರೆ. ಸಾಫ್ಟ್​ವೇರ್ ಕಂಪನಿಯಲ್ಲಿ ಕೆಲಸ ಮಾಡುವಾಗ ಸಾರಾ ಹಾಗೂ ರವಿಕುಮಾರ್ ನಡುವೆ ಪ್ರೇಮಾಂಕುರವಾಗಿತ್ತು. ಎರಡು ಕುಟುಂಬಗಳು ಪರಸ್ಪರ ಒಪ್ಪಿಕೊಂಡು ಹಿಂದು ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾರೆ. ಸಾರಾ ಹಿಂದೂ ಸಂಪ್ರದಾಯಕ್ಕೆ ಮನಸೋತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net