ಯುವತಿ ಮೇಲೆ ಆ್ಯಸಿಡ್​ ಹಾಕಿದ್ದೇಕೆ? ಪೊಲೀಸರ ಮುಂದೆ ಸ್ಫೋಟಕ‌ ಸತ್ಯ ಬಾಯ್ಬಿಟ್ಟ ಆರೋಪಿ ನಾಗ!

Accused Naga
Published on

ಬೆಂಗಳೂರು: ಸುಂಕದಕಟ್ಟೆಯಲ್ಲಿ ಹಾಡಹಗಲೇ ಯುವತಿಯ ಮೇಲೆ ಆ್ಯಸಿಡ್​ ದಾಳಿ ನಡೆಸಿದ ಪ್ರಕರಣದಲ್ಲಿ ಕಾಮಾಕ್ಷಿ ಪಾಳ್ಯ ಪೊಲೀಸರಿಂದ ಬಂಧನವಾಗಿರುವ ಆರೋಪಿ ನಾಗೇಶ್​ ವಿಚಾರಣೆ ವೇಳೆ ಪೊಲೀಸರ ಮುಂದೆ ಸ್ಫೋಟಕ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.

ಆರೋಪಿ ನಾಗೇಶ್​ನನ್ನು ಬಂಧಿಸಿದ ಬೆನ್ನಲ್ಲೇ ಆ್ಯಸಿಡ್ ಹಾಕಿದ್ದು ಯಾಕೆ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ನಾಗ, ನಾನು ಆ್ಯಸಿಡ್ ಹಾಕುವುದಕ್ಕೆ ಯುವತಿಯೇ ಕಾರಣ ಎಂದಿದ್ದಾನೆ.

ನಾನು ಆ್ಯಸಿಡ್ ಹಾಕಬಾರದು ಅಂದುಕೊಂಡಿದ್ದೆ. ಘಟನೆ ಹಿಂದಿನ ದಿನ ಬಾಯಿ ಮಾತಿಗೆ ಆ್ಯಸಿಡ್ ಹಾಕ್ತೀನಿ ಎಂದು ಯುವತಿಗೆ ಹೇಳಿದ್ದೆ. ಆದರೆ, ಯುವತಿ ಅದನ್ನು ಅವರ ತಂದೆಗೆ ಹೇಳಿದಳು. ಬಳಿಕ ಅವರ ತಂದೆ ನನ್ನ ಅಣ್ಣನಿಗೆ ಹೇಳದರು. ನನ್ನ ಅಣ್ಣ ನನಗೆ ಚೆನ್ನಾಗಿ ಬೈದಿದ್ದ. ಇದರಿಂದ ಆ್ಯಸಿಡ್ ಹಾಕಿಯೇ ಬಿಡೋಣ ಎಂದು ನಿರ್ಧರಿಸಿಬಿಟ್ಟೆ ಎಂದು ಆ್ಯಸಿಡ್ ನಾಗ ಹೇಳಿಕೆ ನೀಡಿದ್ದಾನೆ.

ಘಟನೆಯ ಬಳಿಕ ತಮಿಳುನಾಡಿನ ತಿರುವಣ್ಣಾಮಲೈಗೆ ಪರಾರಿಯಾಗಿ ಆಶ್ರಮವೊಂದರಲ್ಲಿ ಸೇರಿಕೊಂಡು ಸ್ವಾಮೀಜಿ ವೇಷ ಹಾಕಿಕೊಂಡಿದ್ದನು. ಘಟನೆ ನಡೆದ 16 ದಿನಗಳ ಬಳಿಕ ಇದೀಗ ನಾಗನನ್ನು ಬಂಧಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net