

ಬಂಟ್ವಾಳ: ಗಾಂಧಿ ಜಯಂತಿ ಪ್ರಯುಕ್ತ ಜಮೀಯ್ಯತುಲ್ ಫಲಾಹ್‌ನ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಗಾಂಧೀಜಿ ಬದುಕು ಆಧರಿಸಿದ ರಸ ಪ್ರಶ್ನೆ, ತರಬೇತಿ ಕಾರ್ಯಾಗಾರ ಹಾಗೂ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಬಿ.ಸಿ ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಗುರುವಾರ ನಡೆಯಿತು.
ಅತಿಥಿಗಳಾಗಿದ್ದ ಕೆ.ಎನ್.ಗಂಗಾಧರ ಆಳ್ವ, ಬಿ.ಕೆ.ಅಬ್ದುಲ್ಲಾ ಕುಂಞಿ ಹಾಜಿ, ಡಾ.ಹಸೀನಾ ಶುಭಹಾರೈಸಿದರು.
ಸಂಸ್ಥೆಯ ಜಿಲ್ಲಾಧ್ಯಕ್ಷ ಅಶ್ಫಾಕ್ ಅಹ್ಮದ್ ವಿದ್ಯಾರ್ಥಿವೇತನ ವಿತರಿಸಿದರು. ಸಾಧಕಿಯರಾದ ಸಜ್ಲ ಇಸ್ಮಾಯಿಲ್ ಹಾಗೂ ಫಾತಿಮತ್ ಅಬೀರ ಅವರನ್ನು ಸನ್ಮಾನಿಸಲಾಯಿತು. ಜತೆಗೆ ಅಶ್ಫಾಕ್ ಅಹ್ಮದ್ ಕಾರ್ಕಳ, ಲತೀಫ್ ನೇರಳಕಟ್ಟೆ, ಬಿ.ಎಂ.ತುಂಬೆ ಅವರನ್ನು ಗೌರವಿಸಲಾಯಿತು. ಸ್ಕೇಟಿಂಗ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಫಾತಿಮತ್ ಸೈದಾ ಅವರನ್ನು ಅಭಿನಂದಿಸಲಾಯಿತು.
ರಾಜ್ಯಮಟ್ಟದ ತರಬೇತುದಾರ ಅಬ್ದುಲ್ ರಜಾಕ್ ಅನಂತಾಡಿ, ಪ್ರಮುಖರಾದ ಮುಹಮ್ಮದ್ ಹನೀಫ್, ಕೆ.ಕೆ.ಶಾಹುಲ್ ಹಮೀದ್, ಮೊಹಮ್ಮದ್ ಸಾಹೇಬ್, ರಶೀದ್ ವಿಟ್ಲ, ರಫೀಕ್ ಆಲಡ್ಕ, ಅಬೂಬಕ್ಕರ್, ವಿ.ಎಚ್.ಅಶ್ರಫ್, ಕೆ.ಎಸ್.ಮೊಹಮ್ಮದ್, ಅರ್ಶದ್, ಡಿ.ಪಿ.ಅಹ್ಮದ್ ಶಾಫಿ, ಅಬ್ದುಲ್ ರಜಾಕ್, ಟಿ.ಕೆ.ಮುಹಮ್ಮದ್, ಅಬೂಬಕ್ಕರ್ ಪುತ್ತು, ಇಬ್ರಾಹಿಂ ಮೊಯಿದಿನ್, ಅಶ್ರಫ್ ಉಪಸ್ಥಿತರಿದ್ದರು. ಹಕೀಂ ಕಲಾಯಿ ಸ್ವಾಗತಿಸಿದರು, ಪಿ.ಮೊಹಮ್ಮದ್ ಹಾಗೂ ಹಂಜಾ ಬಸ್ತಿಕೋಡಿ, ಆನಿಯಾ ದರ್ಬಾರ್ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಆಸಿಫ್ ಇಕ್ಬಾಲ್ ವಂದಿಸಿದರು. ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.