ಕನಕಗಿರಿ: ಪೊಲೀಸ್ ಇಲಾಖೆ ಜನಸ್ನೇಹಿಯಾಗಲು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ಹೇಳಿದರು.
ಪಟ್ಟಣದ ಕೆಪಿಎಸ್(ಕಾಲೇಜು ವಿಭಾಗ)ದಲ್ಲಿ ಹಮ್ಮಿಕೊಂಡಿದ್ದ ಅಂತರ್ ತಾಲೂಕಿನ ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು. ಪೊಲೀಸ್ ಇಲಾಖೆಯಿಂದ ಜನರಿಗಿರುವ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಇಲಾಖೆ ಕೆಲಸ ಮಾಡುತ್ತಿದೆ ಎಂದರು.
ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಮಾರೆಪ್ಪ ಎನ್.ಮಾತನಾಡಿ, ಪೊಲೀಸ್ ಇಲಾಖೆಯು ಜನರೊಟ್ಟಿಗೆ ಬೆರೆತು ಉತ್ತಮ ಬಾಂಧವ್ಯ ಹೊಂದಲು ರಸಪ್ರಶ್ನೆ ಸ್ಪರ್ಧೆ ಸಹಕಾರಿಯಾಗಲಿವೆ ಎಂದರು.
ಇದನ್ನೂ ಓದಿ: ಸರ್ಕಾರ ಖರೀದಿಸುವ ಹಾಲಿನ ದರ ಹೆಚ್ಚಲಿ
ರಸಪ್ರಶ್ನೆ ಸ್ಪರ್ಧೆಯಲ್ಲಿ ಗಂಗಾವತಿ ಕೊಲ್ಲಿನಾಗೇಶ್ವರ ಪ್ರಥಮ ದರ್ಜೆ ಕಾಲೇಜಿನ ಲಕ್ಷ್ಮೀಕಾಂತ ಹಾಗೂ ಚಂದ್ರಶೇಖರ (ಪ್ರಥಮ), ಪಟ್ಟಣದ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅನಿಲಕುಮಾರ ಮತ್ತು ವೆಂಕಟೇಶ (ದ್ವಿತೀಯ) ಹಾಗೂ ಕೆಪಿಎಸ್ (ಕಾಲೇಜು ವಿಭಾಗ) ಆಕಾಶ, ಕಲ್ಯಾಣಕುಮಾರ (ತೃತೀಯ) ಸ್ಥಾನ ಪಡೆದುಕೊಂಡರು.
ಪಿಐ ಜಗದೀಶ ಕೆ.ಜೆ., ಎಎಸ್‌ಐಗಳಾದ ಲಕ್ಕಪ್ಪ, ಜಾಫರುದ್ದೀನ್, ಗಾಣದಾಳ ಕಾಲೇಜಿನ ಪ್ರಾಚಾರ್ಯ ಶಿವಪ್ಪ ಹಲಕಿ, ಉಪನ್ಯಾಸಕರಾದ ಕೇಶವ್ ಎಚ್.ಎಸ್., ಹನುಮಂತಪ್ಪ ತಿದಿ, ಚಂದ್ರಶೇಖರ ಇತರರಿದ್ದರು.