

ಕಲಬುರಗಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪಠ್ಯಾಧಾರಿತ ಗಣಿತ, ವಿಜ್ಞಾನ, ಆಂಗ್ಲ ಭಾಷೆಯ ವಸ್ತು ನಿಷ್ಠ ಪ್ರಶ್ನೆವುಳ್ಳ ಅಂತರ್‌ಶಾಲಾ ಸಬ್ಜೆಕ್ಟ್ ಪ್ಲಸ್ ರಸಪ್ರಶ್ನೆ ಸ್ಪರ್ಧೆ ಜ.19ರಂದು ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಅಭಿಷೇಕ ಚನ್ನಾರಡ್ಡಿ ಪಾಟೀಲ್ ತಿಳಿಸಿದ್ದಾರೆ.
ಆಂಗ್ಲ ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಆಯೋಜಿಸಲಾಗುತ್ತಿದ್ದು, ವಿಜೇತರಿಗೆ ಒಂದು ಲಕ್ಷ ರೂ. ಬಹುಮಾನತ ಮತ್ತು ಪ್ರಸಕ್ತ ವರ್ಷದಿಂದ ಉನ್ನತ ೧೬ ಶಾಲಾ ತಂಡಗಳಿಗೆ ವಿಶೇಷ ಬಹುಮಾನ ನೀಡಲಾಗುವುದು. ಸಿಬಿಎಸ್‌ಸಿ, ಸ್ಟೇಟ್ ಬೋರ್ಡ್, ಕನ್ನಡ ಹಾಗೂ ಆಂಗ್ಲ ಮಾಧ್ಯಮದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ವಿವಿಧ ಶಾಲೆಯ ವಿದ್ಯಾರ್ಥಿಗಳನ್ನು ನೋಂದಾಯಿಸಬೇಕು ಎಂದು ಕೋರಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲೇ ಅತಿ ದೊಡ್ಡ ಸ್ಪರ್ಧೆ ಇದಾಗಿದ್ದು, ಮಕ್ಕಳಲ್ಲಿ ಕಲಿಕೆ, ವೈಜ್ಞಾನಿಕ ಮನೋಭಾವ, ಭಾಷಾ ಸಾಮರ್ಥ್ಯ ಉತ್ತೇಜಿಸಲಾಗುತ್ತದೆ. ಆಂಗ್ಲ ಮತ್ತು ಕನ್ನಡ ಮಾಧ್ಯಮದ ಪ್ರತ್ಯೇಕ ವಿದ್ಯಾರ್ಥಿಗಳಿಗೆ ಪ್ರಥಮ ವಿಜೇತ ಶಾಲಾ ತಂಡಕ್ಕೆ ೨೫,೦೦೦ ರೂ., ದ್ವಿತೀಯ ತಂಡಕ್ಕೆ ೧೫,೦೦೦ ರೂ. ಹಾಗು ತೃತೀಯ ತಂಡಕ್ಕೆ ೧೦,೦೦೦ ರೂ. ಮತ್ತು ಪಾರಿತೋಷಕಗಳನ್ನು ನ್ಯಾಯಮೂರ್ತಿ ಡಾ.ಶಿವರಾಜ ವಿ. ಪಾಟೀಲ್ ನೀಡಲಿದ್ದಾರೆ ಎಂದರು. ಸ್ಪರ್ಧೆಯಲ್ಲಿ ಭಾಗವಹಿಸಲು ಶಾಲಾ ಮುಖ್ಯಸ್ಥರು ಅಥವಾ ವಿದ್ಯಾರ್ಥಿಗಳು ಜ.೧೫ರೊಳಗೆ ಸಂಯೋಜಕರನ್ನು (೯೭೩೯೭೭೫೫೦೦) ಸಂಪರ್ಕಿಸಲು ಕೋರಿದ್ದಾರೆ.