ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

28Anand6
ಬೆಳಗಾವಿಯ ಶಿಂದೋಳಿಯ ಗೋಪಾಲ ಜಿನಗೌಡ ಎಜುಕೇಶನ್ ಟ್ರಸ್ಟ್‌ನ ದೇವೇಂದ್ರ ಜಿನಗೌಡ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಸ ಪ್ರಶ್ನೆ ಸ್ಪರ್ಧೆೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನಗಳಿಸಿ, ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಚಿನ್ಮಯ ಮ್ಯಾಗೋಟಿ, ಸಂಪ್ರೀತ ದೇಮಶೆಟ್ಟಿ ಮತ್ತು ಮೇಘನಾ ಕದಂ ಅವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಶಿಕ್ಷಕಿ ವಿಜಯಲಕ್ಷ್ಮೀ ಪಾಟೀಲ ಇತರರಿದ್ದರು.
Published on

ಬೆಳಗಾವಿ: ವಿದ್ಯಾಭಾರತಿ ಕರ್ನಾಟಕ ಸಹಯೋಗದಲ್ಲಿ ಮಂಗಳೂರಿನ ತಲಪಾಡಿಯಲ್ಲಿ ನಡೆದ ವಿಜ್ಞಾನ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಶಿಂದೋಳಿಯ ಗೋಪಾಲ ಜಿನಗೌಡ ಎಜುಕೇಶನ್ ಟ್ರಸ್ಟ್‌ನ ದೇವೇಂದ್ರ ಜಿನಗೌಡ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ರಾಜ್ಯದಲ್ಲಿ ಪ್ರಥಮ ಸ್ಥಾನಗಳಿಸಿ, ರಾಜಸ್ಥಾನದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಚಿನ್ಮಯ ಮ್ಯಾಗೋಟಿ, ಸಂಪ್ರೀತ ದೇಮಶೆಟ್ಟಿ ಮತ್ತು ಮೇಘನಾ ಕದಂ ಅವರಿಗೆ ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಪಾಟೀಲ ಮಾರ್ಗದರ್ಶನ ನೀಡಿದ್ದಾರೆ. ಮನೋಜ ಮೋದಗೇಕರ ವಿದ್ಯಾರ್ಥಿಯು ಮಧ್ಯಪ್ರದೇಶದ ದೇವಾಸನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ತತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾನೆ. ಸಂಸ್ಥೆಯ ಅಧ್ಯಕ್ಷ ಗೋಪಾಲ ಜಿನಗೌಡ, ಕಾರ್ಯದರ್ಶಿ ಕುಂತುಸಾಗರ ಹರದಿ, ಆಡಳಿತ ಮಂಡಳಿ ಅವರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net