ಮೈಸೂರಿನಲ್ಲಿ ಶಿಕ್ಷಕರಿಗೆ ರಸಪ್ರಶ್ನೆ ಸ್ಪರ್ಧೆ

Published on

ಮೈಸೂರು: ರೋಟರಿ ಮೈಸೂರು ಚಿಲ್ಡ್ರನ್ಸ್ ಲೈಬ್ರರಿ, ರೋಟರಿ ಮಕ್ಕಳ ಗ್ರಂಥಾಲಯ, ವಾಚನಾಲಯ ಸಮಿತಿಯಿಂದ ಜು.12ರಂದು ಮುಡಾ ಎದುರು ಇರುವ ರೋಟರಿ ಸಭಾಂಗಣದಲ್ಲಿ ನಗರ ಮತ್ತು ಗ್ರಾಮಾಂತರ ಶಿಕ್ಷಕರಿಗಾಗಿ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ ಎಂದು ರೋಟರಿ ಸದಸ್ಯ ಮುಬೀನ್ ಸೇಠ್ ತಿಳಿಸಿದರು.

ಆಸಕ್ತರು ಜು.5ರೊಳಗೆ ನೋಂದಣಿ ಮಾಡಿಕೊಳ್ಳಲು ಕೊನೆ ದಿನವಾಗಿದೆ. ಎಲ್‌ಕೆಜಿಯಿಂದ 10ನೇ ತರಗತಿವರೆಗೆ ಬೋಧಿಸುವವರು ಪಾಲ್ಗೊಳ್ಳಬಹುದಾಗಿದೆ. ವಿಜೇತರಿಗೆ ಮೊದಲ ಬಹುಮಾನವಾಗಿ 15 ಸಾವಿರ, ಎರಡನೇ ಬಹುಮಾನವಾಗಿ 10 ಹಾಗೂ ಮೂರನೇ ಬಹುಮಾನವಾಗಿ 8 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಯೋಜಕರಾದ ರೂಪಾ ವೆಂಕಟೇಶ್, ಕೆ.ವಿ.ಕೃಷ್ಣಾನಂದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net