

ಮೈಸೂರು: ಸ್ವಾತಂತ್ರೃ ಹೋರಾಟಗಾರರ ಸಂಘದ ವತಿಯಿಂದ ನಗರದ ಸುಬ್ಬರಾಯನಕೆರೆ ಆವರಣದಲ್ಲಿ ಬುಧವಾರ ಕ್ವಿಟ್ ಇಂಡಿಯಾ ಚಳವಳಿ ದಿನ ಆಚರಿಸಲಾಯಿತು.
ಸಂಘದ ಅಧ್ಯಕ್ಷ ವೈ.ಸಿ. ರೇವಣ್ಣ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರೃ ಹೋರಾಟಗಾರರಲ್ಲಿ ಹೋರಾಟದ ಕಿಚ್ಚು ಹಚ್ಚಲು ಗಾಂಧೀಜಿ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿಗೆ ಕರೆ ನೀಡಿದರು. ಈ ಚಳವಳಿ ದೇಶವನ್ನು ಸ್ವಾತಂತ್ರೃ ಗೊಳಿಸುವಲ್ಲಿ ಮಹತ್ವದ ಹಂತವಾಯಿತು ಎಂದರು.
ನಗರಪಾಲಿಕೆ ಸದಸೆ ಪ್ರಮೀಳಾ ಭರತ್ ಮಾತನಾಡಿ, ಬ್ರಿಟಿಷರು ನಮ್ಮ ದೇಶದ ಸಂಪತ್ತು ಲೂಟಿ ಮಾಡಿದರು. ಬ್ರಿಟಿಷರ ದಬ್ಬಾಳಿಕೆ ವಿರೋಧಿಸಿ ಸಂಗೋಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಸೇರಿ ಹಲವರು ಹೋರಾಡಿ ಬಲಿದಾನವಾದರು. ದೇಶಕ್ಕೆ ಸ್ವಾತಂತ್ರೃ ದೊರೆಯಲು ಕ್ವಿಟ್ ಇಂಡಿಯಾ ಮಹತ್ವದ ಪಾತ್ರ ನಿರ್ವಹಿಸಿತು. ಗಾಂಧೀಜಿ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ ಹೋರಾಟದ ಫಲವಾಗಿ 1947ರಲ್ಲಿ ದೇಶಕ್ಕೆ ಸ್ವಾತಂತ್ರೃ ದೊರೆಯಿತು ಎಂದರು.
ವಿವಿಧ ಸಂಘಟನೆಗಳ ಪ್ರಮುಖರಾದ ಪರಮೇಶ್ ಗೌಡ, ಸುರೇಂದ್ರ, ಪಾಪಣ್ಣ, ರಾಜೇಂದ್ರ, ಸುದರ್ಶನ್, ಶ್ರೀನಿವಾಸ್, ವ್ನಿೇಶ್ವರ ಭಟ್, ರಾಜೇಂದ್ರ, ರಾಜೇಶ್ ಹಾಗೂ ಇತರರು ಇದ್ದರು