ಕ್ವಿಂಟಾಲ್ ಮಿತಿ ಷರತ್ತು ಹಿಂಪಡೆಯಲು ಸಹಕಾರ ಸಚಿವಗೆ ರೈತ ಮುಖಂಡರ ನಿಯೋಗ ಮನವಿ

070123 Sindhanuru ST Somashekhara Appeal
ಜೋಳದ ಖರೀದಿಗೆ ಸಂಬಂಧಿಸಿ ಸಂಸದರ ನೇತೃತ್ವದ ನಿಯೋಗ ಸಚಿವ ಎಸ್.ಟಿ.ಸೋಮಶೇಖರ ಅವರನ್ನು ಶುಕ್ರವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.
Published on

ಸಿಂಧನೂರು: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಸಂಬಂಧಿಸಿ ಕ್ವಿಂಟಾಲ್ ಮಿತಿ ಷರತ್ತು ತೆಗೆಯಲು ರೈತ ಮುಖಂಡರ ನಿಯೋಗ ಶುಕ್ರವಾರ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿತು.

ಕೊಪ್ಪಳ ಸಂಸದ ಸಂಗಣ್ಣ ಕರಡಿ, ಕೃಷಿ ಬೆಲೆ ಆಯೋಗದ ಮಾಜಿ ರಾಜ್ಯಾಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಕಳೆದ ವರ್ಷದಂತೆಯೇ ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಹಿಡುವಳಿ (ಜಮೀನು) ಆಧರಿಸಿ ಜೋಳ ಖರೀದಿ ಮಾಡಬೇಕು. ಈಗಾಗಲೇ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಈ ಕುರಿತು ಶೀಘ್ರ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಈ ಬಗ್ಗೆ ಸಿಎಂ ಗಮನಕ್ಕೆ ತಂದು ಕಳೆದ ವರ್ಷದಂತೆಯೇ ಖರೀದಿ ಪ್ರಕ್ರಿಯೆ ನಡೆಸಲು ಸೂಚನೆ ನೀಡುವುದಾಗಿ ತಿಳಿಸಿದರು. ಎಪಿಎಂಸಿ ಮಾಜಿ ರಾಜ್ಯಉಪಾಧ್ಯಕ್ಷ ರಾಜಶೇಖರ ಪಾಟೀಲ್, ರಾಗಲಪರ್ವಿ ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೋರೆಬಾಳ, ರೈತ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net