

ಹುಬ್ಬಳ್ಳಿ: ಇಲ್ಲಿಯ ಅಕ್ಕಾ ಫೌಂಡೇಷನ್ ಟ್ರಸ್ಟ್, ಬಸವ ಆರ್ಟ್ ಟೆಕ್ನಿಕಲ್ ಆ್ಯಂಡ್ ರಿಸೈಕಲಿಂಗ್ ಮ್ಯೂಜಿಯಂ ಮತ್ತು ಶಿಲ್ಪಾ ಇನ್ಫೋಟೆಕ್ ವತಿಯಿಂದ ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣಾರ್ಥ ನಗರದ ನಾರಾಯಣ ಚೌಕ್ ನಲ್ಲಿ ಬುಧವಾರ ಕ್ವಿಟ್ ಪ್ಲಾಸ್ಟಿಕ್ ರ್ಯಾಪರ್ ವೇಸ್ಟ್ ಅಭಿಯಾನ ನಡೆಸಲಾಯಿತು.
ಸನ್ ರೇ ಸೋಲಾರ್ ಮ್ಯೂಸಿಯಂನ ಮಹೇಶ ಶಿವಶಿಂಪಿಗೇರ ಹುತಾತ್ಮ ನಾರಾಯಣ ಡೋಣಿ ಅವರ ಮೂತಿರ್ಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು.
ಪ್ಲಾಸ್ಟಿಕ್ ವಿರೋಧಿಸಿ ಸರ್ಕಾರಕ್ಕೆ ಪತ್ರ ರವಾನಿಸಲಾಯಿತು. ಟ್ರಸ್ಟ್ ಅಧ್ಯಕ್ಷ ವೀರಪ್ಪಾ ಅರಕೇರಿ, ನಾರ್ಥ್ ಕರ್ನಾಟಕ ವುಮನ್ ಫೌಂಡೇಷನ್ ನ ಅಶ್ವಿನಿ ಕುಬಸದ, ಖಂಡೋಬಾ ಡೋಣಿ, ಇತರರು ಇದ್ದರು.