ಸಿರಿಮಜ್ಜನಪಲ್ಲಿ ರಸ್ತೆಗೆ ಡಾಂಬರೀಕರಣ

dj p pura kamagari
Published on

ಪರಶುರಾಮಪುರ: ಪರಶುರಾಮಪುರ ಹೊರವಲಯದ ಸಿರಿಮಜ್ಜನಪಲ್ಲಿಗೆ ತೆರಳುವ ರಸ್ತೆ ಕಳೆದ ಏಳೆಂಟು ವರ್ಷಗಳಿಂದ ಗುಂಡಿಗಳಿಂದ ಕೂಡಿದ್ದ ರಸ್ತೆಯ ದುರಸ್ತಿಗೆ ಕೆಲ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ರಸ್ತೆ ದುಸ್ಥಿತಿಯನ್ನು ವಿಜಯವಾಣಿ ವರದಿ ಮಾಡಿತ್ತು.

ಪತ್ರಿಕೆಯ ವರದಿಗೆ ಸ್ಪಂದಿಸಿದ ಶಾಸಕ ಟಿ.ರಘುಮೂರ್ತಿ, ಸರ್ಕಾರದ ವಿವಿಧ ಯೋಜನೆಯಡಿ ಗಡಿಭಾಗದ ಕನ್ನಡಿಗರ ಒತ್ತಾಸೆಯಂತೆ ಒಂದು ಕೋಟಿ ರೂ. ಅನುದಾನ ಮೀಸಲಿಟ್ಟು, ಕಚ್ಚಾ ರಸ್ತೆಗೆ ಡಾಂಬರೀಕರಣ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಗೊಂಡಿದ್ದು, ತ್ವರಿತಗತಿಯಲ್ಲಿ ಕೆಲಸ ಪೂರ್ಣಗೊಳಿಸಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ರೈತಸಂಘದ ನವೀನ ಗೌಡ, ಪರಶುರಾಮಣ್ಣ, ಜಂಪಣ್ಣ, ಚೌಳೂರು ಪ್ರಕಾಶ, ಜೆ.ಜೆ.ಗುಂಟೆ ಹನುಮಂತಪ್ಪ, ತಿಪ್ಪೇಸ್ವಾಮಿ, ಶಿವಣ್ಣ, ರಾಮಣ್ಣ, ಗುತ್ತಿಗೆದಾರ ಶ್ರೀನಿವಾಸರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net