ಶೀಘ್ರ ಹೊಲಿಗೆ ಕೇಂದ್ರ ಆರಂಭ

Kampli Meshin
ಕಂಪ್ಲಿಯಲ್ಲಿ ಶಾಸಕ ಜೆ.ಎನ್.ಗಣೇಶ್ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿದರು. ಪ್ರಮುಖರಾದ ಆರ್.ಕೆ.ಶ್ರೀಕುಮಾರ್, ಶಿವಪ್ಪ, ಮಹಮ್ಮದ್ ತಾಸೀನ್, ಡಾ.ಸಿ.ಆರ್.ಅಭಿಲಾಷಾ, ಡಾ.ಎ.ಸಿ.ದಾನಪ್ಪ, ಎಂ.ಸುಧೀರ್, ಭಾವನಾ ಇತರರಿದ್ದರು.
Published on

ಕಂಪ್ಲಿ: ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಸೋಮವಾರ ಬಳ್ಳಾರಿ ಮೀನುಗಾರಿಕೆ ಇಲಾಖೆಯಿಂದ 55 ಜನ ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ ಮೀನುಗಾರಿಕೆ ಸಲಕರಣೆ ಹಾಗೂ ಜಿಲ್ಲಾ ಕೈಗಾರಿಕಾ ಇಲಾಖೆಯಿಂದ 80 ಜನರಿಗೆ ಹೊಲಿಗೆಯಂತ್ರ ವಿತರಣೆ ಕಾರ್ಯಕ್ರಮ ನಡೆಯಿತು.

ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಎಮ್ಮಿಗನೂರಿನಲ್ಲಿ ಮಹಿಳೆಯರ ಸ್ವಉದ್ಯೋಗಕ್ಕಾಗಿ ಹೊಲಿಗೆ ಕೇಂದ್ರ ತೆರೆಯಲಾಗುವುದು. ಮಹಿಳೆಯರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು.

ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಶಿವಣ್ಣ ಮಾತನಾಡಿ, ರಾಷ್ಟ್ರೀಯ ಮೀನುಗಾರಿಕೆ ಡಿಜಿಟಲ್ ಪ್ಲಾಟ್‌ಫಾರ್ಮ್‌ನ ಪ್ರಧಾನಮಂತ್ರಿ ಮತ್ಸ್ಯ ಕಿಸಾನ್ ಯೋಜನೆಯಡಿ ಅಸಂಘಟಿತ ಮೀನುಗಾರ ಕುಟುಂಬಗಳಿಗೆ ಗುರುತಿನಚೀಟಿ, ಪ್ರಮಾಣಪತ್ರ ನೀಡಲಾಗುವುದು. 55 ಪರಿಶಿಷ್ಟ ಮೀನುಗಾರರಿಗೆ ತಲಾ 10 ಸಾವಿರ ರೂ. ಮೌಲ್ಯದ ಬಲೆ, ಜಾಕೆಟ್, 16 ಜನರಿಗೆ ತಲಾ 10 ಸಾವಿರ ರೂ. ಮೌಲ್ಯದ ಹರಿಗೋಲು ವಿತರಿಸಲಾಗಿದೆ ಎಂದರು.

ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಮಹಮ್ಮದ್ ತಾಸೀನ್ ಮಾತನಾಡಿ, ಕಂಪ್ಲಿ ತಾಲೂಕಿನ 37, ಕುರುಗೋಡಿನ 34, ಬಳ್ಳಾರಿ ತಾಲೂಕಿನ 9 ಮಹಿಳೆಯರಿಗೆ ತಲಾ 8ಸಾವಿರ ರೂ. ಮೌಲ್ಯದ ಹೊಲಿಗೆ ಯಂತ್ರ ನೀಡಲಾಗಿದೆ ಎಂದು ತಿಳಿಸಿದರು.

ಅಧಿಕಾರಿಗಳಾದ ಡಾ.ಸಿ.ಆರ್.ಅಭಿಲಾಷಾ, ಆರ್.ಕೆ.ಶ್ರೀಕುಮಾರ್, ಭಾವನಾ, ಮಂಜುನಾಥ, ಪ್ರಮುಖರಾದ ಡಾ.ಎ.ಸಿ.ದಾನಪ್ಪ, ಎಂ.ಸುಧೀರ್, ಬಿ.ನಾರಾಯಣಪ್ಪ, ಕರಿಬಸವನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net