ಅಂಗಡಿಗಳ ಮಾಲೀಕರಿಗೆ ಶೀಘ್ರ ಪರಿಹಾರ

SIDDU SAVADI
ವಿದ್ಯುತ್ ಅವಘಡದಿಂದಾಗಿ ಬೆಂಕಿಗಾಹುತಿಯಾದ ಅಂಗಡ ಸ್ಥಳಕ್ಕೆ ಶಾಸಕ ಸಿದ್ದು ಸವದಿ ಭೇಟಿ ನೀಡಿ ಪರಿಶೀಲಿಸಿದರು. ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಬಿಜೆಪಿ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಕುಳ್ಳೊಳ್ಳಿ ಇದ್ದರು.
Published on

ಮಹಾಲಿಂಗಪುರ: ಪಟ್ಟಣದ ಬಸವೇಶ್ವರ ವೃತ್ತ ಬಳಿ ಬುಧವಾರ ವಿದ್ಯುತ್ ಅವಘಡದಿಂದಾಗಿ ಭಸ್ಮಗೊಂಡ ಅಂಗಡಿಗಳ ಸ್ಥಳಕ್ಕೆ ಶಾಸಕ ಸಿದ್ದು ಸವದಿ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ಸ್ಥಳದಲ್ಲಿದ್ದ ಅಂಗಡಿಗಳ ಮಾಲೀಕರಾದ ವಿರೂಪಾಕ್ಷಯ್ಯ ಮುಸಗುಪ್ಪಿಮಠ, ಸಿದ್ದಪ್ಪ ಹಡಪದ, ಬಂದೇನವಾಜ್ ಯಾದವಾಡ್ ಹಾಗೂ ಗುಲಾಬ್ ನದಾಫ್, ತಾವು ಸದರಿ ಅಂಗಡಿಗಳನ್ನೇ ನಂಬಿ ಬದುಕು ಸಾಗಿಸುತ್ತಿದ್ದು, ವಿದ್ಯುತ್ ಅವಘಡದಿಂದಾಗಿ ಅಂಗಡಿಗಳು ಸುಟ್ಟು ಅಪಾರ ನಷ್ಟವಾಗಿದೆ. ಕೂಡಲೇ ಪರಿಹಾರ ನೀಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಶಾಸಕ ಸವದಿ, ಸೂಕ್ತ ತನಿಖೆ ಕೈಗೊಂಡು ವರದಿ ಸಲ್ಲಿಸಲು ಠಾಣಾಧಿಕಾರಿಗೆ ಸೂಚಿಸಿದ್ದು, ಶೀಘ್ರ ಪರಿಹಾರ ಒದಗಿಸುವ ಭರವಸೆ ನೀಡಿದರು.

ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಬಿಜೆಪಿ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಕುಳ್ಳೊಳ್ಳಿ, ಶಿವಾನಂದ ಅಂಗಡಿ, ಪುರಸಭೆ ಸದಸ್ಯ ರಾಜು ಚಮಕೇರಿ, ತಿಪ್ಪಣ್ಣ ಬಂಡಿವಡ್ಡರ, ಜಮೀರ್ ಯಕ್ಸಂಬಿ, ಮಹೇಶ ಜಿಡ್ಡಿಮನಿ, ಬಸವರಾಜ ಮಡಿವಾಳರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net