ಫಲಾನುಭವಿಗಳಿಗೆ ಶೀಘ್ರ ಹಕ್ಕುಪತ್ರ ವಿತರಣೆ

KONAREDDY
Published on

ನವಲಗುಂದ: ಈ ಹಿಂದೆ ಶಾಸಕನಾಗಿದ್ದಾಗ ಪಟ್ಟಣದಲ್ಲಿರುವ ನಿರಾಶ್ರಿತರಿಗೆ ಶಾಶ್ವತ ಮನೆ ನಿರ್ವಿುಸುವ ಉದ್ದೇಶದಿಂದ 41 ಎಕರೆ ಜಮೀನು ಖರೀದಿಸಿ 845 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಅತಿ ಶೀಘ್ರದಲ್ಲಿ ಹಕ್ಕು ಪತ್ರ ವಿತರಿಸಲಾಗುವುದು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಪಟ್ಟಣದ ಬಸವೇಶ್ವರ ನಗರದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ನನಗೆ ಮೂರು ತಿಂಗಳು ಕಾಲಾವಕಾಶ ಕೊಡಿ. ನಿವಾಸಿಗಳ ಹಕ್ಕು ಪತ್ರ ಕುರಿತು ಅಧಿಕಾರಿಗಳ ಸಭೆ ಕರೆದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಗುರುಗಳಾದ ಎಸ್.ಬಿ. ತೋಟಿ, ವಿ.ಎಸ್. ಬಾರಕೇರ ಹಾಗೂ ಮುಳಗುಂದ ಟಿಎಂಸಿ ಮುಖ್ಯಾಧಿಕಾರಿ ಮಂಜುನಾಥ ಗುಳೇದ ಅವರನ್ನು ಸನ್ಮಾನಿಸಲಾಯಿತು. ರಸ್ತೆ ಹಾಗೂ ದೇವಸ್ಥಾನಗಳಿಗೆ ಅನುದಾನ ನೀಡಬೇಕು ಎಂದು ಬಸವೇಶ್ವರ ನಗರದ ನಿವಾಸಿಗಳು ಶಾಸಕ ಎನ್.ಎಚ್. ಕೋನರಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಜೀವನ ಪವಾರ, ಮಂಜುನಾಥ ಜಾಧವ, ಮೋದಿಸಾಬ್ ಶಿರೂರ, ಪ್ರಕಾಶ ಶಿಗ್ಲಿ , ಸುರೇಶ ಮೇಟಿ, ಎಂ.ಬಿ. ತೋಟಿ, ಹನುಮಂತಪ್ಪ ಖಾನಾಪುರ, ಐ.ಜಿ. ಲೋಕಾಪುರಿ, ಏಕನಾಥ ಜಾಧವ, ಹನುಮಂತಪ್ಪ ಮಳಗಿ, ಮಂಜು ಸುಣಗಾರ, ಹನುಮಂತಪ್ಪ ಕುಳಗೇರಿ, ನಾಗರಾಜ ಭಜಂತ್ರಿ, ಚಂದ್ರು ಚಿಕ್ಕನ್ನವರ, ಫಕೀರಪ್ಪ ಕುಳಗೇರಿ, ಹನುಮಂತಪ್ಪ ತೆಗ್ಗಿ, ಆಸೀಫ್ ಹುಸೇನ, ಹುಸೇನಸಾಬ್ ಪುಲಾರೆ, ಚಾಂದಸಾಬ್ ಕೋಟೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net