ಸರ್ಕಾರಿ ಹೈಸ್ಕೂಲ್‌ ಸೀಟ್‌ ಪಡೆಯಲು ಸರತಿ ಸಾಲು

27sirsi6
Published on

ಶಿರಸಿ: ಸರಕಾರಿ ಶಾಲೆ ಎಂದರೆ ಮೂಗು ಮುರಿಯುವ ಕಾಲದಲ್ಲಿ ಇಲ್ಲಿನ ಸರಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ಪ್ರವೇಶಕ್ಕಾಗಿ ಮೊದಲ ದಿನವೇ ೨೫೦ಕ್ಕೂ ಅಧಿಕ ಪಾಲಕರು ಸರತಿಯಲ್ಲಿ ನಿಂತು  ನಮೂನೆ ಸ್ವೀಕರಿಸಿದ್ದು ಗಮನ ಸೆಳೆಯಿತು.

ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯಾರ್ತಿ ಗಳನ್ನು ಹೊಂದಿದ ಇಲ್ಲಿನ ಶ್ರೀ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ರ‍್ಷಕ್ಕೆ ಮಕ್ಕಳನ್ನು ಎಂಟನೇ ರ‍್ಗದಲ್ಲಿ ಓದಿಸಲು ರ‍್ಜಿ ಪಡೆಯಲು ಪಾಲಕರು ಸರತಿಯಲ್ಲಿ ನಿಂತು ಸ್ವೀಕರಿಸಿದರು.

ಎಂಟು ಹಾಗೂ ಒಂಬತ್ತನೇಯ ರ‍್ಗಕ್ಕೆ ೨೦೨೫-೨೬ರ ದಾಖಲಾತಿಗೆ ಪ್ರೌಢ ಶಾಲೆಯಿಂದ ಮರ‍್ಚ ೨೭, ೨೮ ಹಾಗೂ ಏಪ್ರೀಲ್ ೧ರಂದು‌ ರ‍್ಜಿ ನೀಡಲಾಗುತ್ತದೆ ಎಂದು ಪ್ರಕಟಿಸಿತ್ತು. ಇದನ್ನು ಗಮನಿಸಿದ ಇನ್ನೂರೈವತ್ತಕ್ಕೂ ಅಧಿಕ ಪಾಲಕರು ಮೊದಲ ದಿನವೇ ರ‍್ಜಿ ಪಡೆಯಲು ಆಸಕ್ತರಾದರು.

೧೬೦ಕ್ಕೂಅಧಿಕ ರ‍್ಷದ ಇತಿಹಾಸವುಳ್ಳ, ಗಿರೀಶ‌ ಕರ‍್ನಡ, ರಾಮಕೃಷ್ಣ ಹೆಗಡೆ ಅವರೂ ಸೇರಿದಂತೆ‌ ಸಾವಿರಾರು ಸಾಧಕರನ್ನು‌ ಕೊಡುಗೆಯಾಗಿ ನೀಡಿದ ಪ್ರೌಢಶಾಲೆ‌ ಎಂಬ ಹೆಗ್ಗಳಿಕೆ ಇದೆ. ಪ್ರತೀ ರ‍್ಷ ಐನೂರಕ್ಕೂ ಅಧಿಕ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಿಸುವ ಪ್ರೌಢ ಶಾಲೆ ಇದಾಗಿದೆ.

ಈ‌ ಮಧ್ಯೆ ನಾಲ್ಕು ವಿದ್ಯರ‍್ಥಿಗಳು ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದು ದಾಖಲೆ ಮಾಡಿದ್ದಾರೆ. ಎ ಗ್ರೇಡ್ ಮಾನ್ಯತೆಯ ಪ್ರೌಢ ಶಾಲೆಯಲ್ಲಿ ಕಲೆ ಹಾಗೂ ಕ್ರೀಡೆಗೂ ಉತ್ತೇಜನವಿದೆ ಎಂಬುದನ್ನೂ ಗಮನಿಸಿದ ಪಾಲಕರು ಈ ಪ್ರೌಢ ಶಾಲೆಗೆ ಮಕ್ಕಳ ಪ್ರವೇಶಕ್ಕಾಗಿ ಬೇಕಾದ ಆರಂಭಿಕ ರ‍್ಜಿ ಸ್ವೀಕರಿಸಲು ಬಯಸಿದ್ದಾರೆ.

ಗುರುವಾರ ಬೆಳಿಗ್ಗೆಯಿಂದಲೇ ರ‍್ಜಿ ನೀಡಲಾಗುತ್ತಿದ್ದು, ಆಂಗ್ಲ ವಿಭಾಗ, ಕನ್ನಡ ವಿಭಾಗದಲ್ಲಿ ಮಕ್ಕಳ ಸರ‍್ಪಡೆ ಬಯಸಿದ ಪಾಲಕರು ರ‍್ಜಿ ಸ್ವೀಕರಿಸಿದರು.

ಇನ್ನು, ಶುಕ್ರವಾರ ಹಾಗೂ ಏ.೧ ರಂದು‌ ಪ್ರವೇಶದ ರ‍್ಜಿ ವಿತರಣೆ ನಡೆಯಲಿದೆ. ಭರಣ ಮಾಡಿದ ರ‍್ಜಿಯನ್ನು ಏಪ್ರೀಲ್‌ ೯, ೧೧ ಹಾಗೂ ೧೨ರಂದು ಹಿಂದಿನ ತರಗತಿಯ ಅಂಕಪಟ್ಟಿಯ ಜೆರಾಕ್ಸ್ ಪ್ರತಿ ಮತ್ತು ರ‍್ತಿ ಮಾಡಿದ ರ‍್ಜಿಯನ್ನು ವಾಪಸ್ ನೀಡುವುದು ಎಂದು ಪ್ರಭಾರಿ ಉಪ‌ ಪ್ರಾಚರ‍್ಯ ಆರ್.ವಿ.ನಾಯ್ಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net