

ಮಂಡ್ಯ: ತ್ರೈಮಾಸಿಕ ಕಾರ್ಯನಿರ್ವಹಣೆ ಹಮ್ಮಿಕೊಂಡಿರುವುದರಿಂದ ಜೂ.22ರಂದು ನಗರ ಸೇರಿದಂತೆ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ನಗರ ಪ್ರದೇಶಗಳಾದ ಸುಭಾಷ್‌ನಗರ, ಆಶೋಕನಗರ, ವಿ.ವಿ ರಸ್ತೆ, ಹೊಸಹಳ್ಳಿ, ವಿನಾಯಕ ಬಡಾವಣೆ, ನೂರಡಿ ರಸ್ತೆ, ನೆಹರುನಗರ, ಹೊಸಹಳ್ಳಿ, ದ್ವಾರಕನಗರ, ಗಾಂಧಿನಗರ, ಎನ್‌ಜಿಒ ಲೇಔಟ್, ಶ್ರೀರಾಮನಗರ, ಕಾವೇರಿನಗರ 1 ಮತ್ತು 2ನೇ ಹಂತ, ಚಂದ್ರದರ್ಶನ, ಚಾಮುಂಡೇಶ್ವರಿನಗರ, ಅನ್ನಪೂರ್ಣೇಶ್ವರಿನಗರ, ಶಂಕರನಗರ, ಇಂಡುವಾಳು, ಕಿರಗಂದೂರು, ಕಲ್ಲಹಳ್ಳಿ, ಕ್ಯಾತುಂಗೆರೆ ಹಾಗೂ ಗ್ರಾಮಾಂತರ ಪ್ರದೇಶಗಳಾದ ಕಾರಸವಾಡಿ, ಮಂಗಲ, ಹನಿಯಂಬಾಡಿ, ಚೀರನಹಳ್ಳಿ, ಹೆಬ್ಬಕವಾಡಿ, ಕೊತ್ತತ್ತಿ, ಮೊತ್ತಹಳ್ಳಿ, ಬೇವಿನಹಳ್ಳಿ, ಹುಲ್ಲುಕೆರೆ, ಎ.ಹುಲಿಕೆರೆ, ಬಿ.ಹುಲಿಕೆರೆ ಮತ್ತು ಐ.ಪಿ ಮಾರ್ಗಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳಗ್ಗೆ 9ಗಂಟೆಯಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.