

ಹಳೇಬೀಡು: ಕರೊನಾ ಶಂಕಿತ ವ್ಯಕ್ತಿ ಸಾರ್ವಜನಿಕ ಸಂಪರ್ಕದಲ್ಲಿದ್ದ ಕಾರಣ ಸಮೀಪದ ಚೀಲನಾಯ್ಕನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಪ್ರವೇಶ ನಿಷೇಧಿಸಿ ಸೀಲ್ ಮಾಡಲಾಗಿದೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಚೀಲನಾಯ್ಕನ ಹಳ್ಳಿ ಮೂಲದ ವ್ಯಕ್ತಿಯನ್ನು ವಾರದ ಹಿಂದೆ ಹಾಸನದ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಆದರೆ, ವ್ಯಕ್ತಿಯು ನಿಯಮ ಉಲ್ಲಘಿಂಸಿ ಸಾರ್ವಜನಿಕ ಸಂಪರ್ಕ ಬೆಳೆಸಿದ್ದನ್ನು ಗಮನಿಸಿ ಮತ್ತು ಕರೊನಾ ಪ್ರಾಥಮಿಕ ಲಕ್ಷಣ ಕಂಡುಬಂದ ಹಿನ್ನಲೆಯಲ್ಲಿ ಇಂದು ಆತನನ್ನು ಪುನಃ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ತಾಲೂಕು ಆರೋಗ್ಯಾಧಿಕಾರಿ, ಬೇಲೂರು ವೈದ್ಯಾಧಿಕಾರಿ ಪ್ರಾಥಮಿಕ ಸಂಪರ್ಕ ಹೊಂದಿದವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು, ಪೊಲೀಸರು ಶಂಕಿತನ ಪೋಷಕರು ಹಾಗೂ ಮನೆಯ ನೂರು ಮೀಟರ್ ವ್ಯಾಪ್ತಿ ಪ್ರದೇಶವನ್ನು ಸೀಲ್ ಮಾಡಿದ್ದಾರೆ