

ಬೆಂಗಳೂರು: ಕರೊನಾ ವೈರಸ್ ಮುನ್ನೆಚ್ಛರಿಕಾ ಕ್ರಮವಾಗಿ ಹಾಕಲಾಗಿದ್ದ ಕ್ವಾರಂಟೈನ್ ಸೀಲ್ನಿಂದಲೇ ಯುವತಿಯೊಬ್ಬಳು ಪರದಾಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಎಲ್ಲಿಗೂ ಹೋಗಲು ಸಾಧ್ಯವಾಗದೇ ಯುವತಿ ಮೆಜಿಸ್ಟಿಕ್ನಲ್ಲೇ ಪರದಾಡಿದ್ದಾಳೆ. ಯುವತಿ ಪಾಟ್ನಾದಿಂದ ಬಂದಿದ್ದಳು. ಕ್ವಾರಂಟೈನ್ ಅವಧಿ ಮುಗಿದ್ದಿದ್ದರೂ ಕೈಯಲ್ಲಿದ್ದ ಸೀಲ್ ನೋಡಿ ಅವಳ ಹೇಳಿದ ಜಾಗಕ್ಕೆ ಕರೆದೊಯ್ಯಲು ಚಾಲಕರು ಭಯಭೀತರಾಗಿ ಹಿಂದೇಟು ಹಾಕಿದರು. ಯುವತಿ ಎಷ್ಟೇ ಗೋಗರೆದರೂ ಚಾಲಕರ ಮನಸ್ಸು ಮಾತ್ರ ಕರಗಲೇ ಇಲ್ಲ. ಇದನ್ನೂ ಓದಿ: ಮಿಯಾಂವ್ ಮಿಯಾಂವ್: ಬೆಕ್ಕಿನ ಚಿತ್ರದೊಂದಿಗೆ ಮುಂಬೈ ಜನತೆಗೆ ಪೊಲೀಸರ ಎಚ್ಚರಿಕೆ!
ಕರೊನಾ ಬಂದಾಗಿನಿಂದ ಜನರು ಭಯಭೀತರಾಗಿದ್ದು, ಬೇರೆ ದೇಶ, ರಾಜ್ಯ ಹಾಗೂ ಊರುಗಳಿಂದ ಬರುವವರನ್ನು ಮುನ್ನೆಚ್ಛರಿಕಾ ಕ್ರಮವಾಗಿ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇಡಲಾಗುತ್ತದೆ. ಈ ವೇಳೆ ಅವರು ಎಲ್ಲಿಯೂ ಓಡಾಡುವಂತಿಲ್ಲ. ಹೀಗಾಗಿ ಯುವತಿಯ ಕೈಯಲ್ಲಿದ್ದ ಕ್ವಾರಂಟೈನ್ ಸೀಲ್ ನೋಡಿ ಗಾಬರಿಗೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)