ಕ್ವಾರಂಟೈನ್ ಕೇಂದ್ರದ ವಲಸಿಗರಿಗೆ ಖಾದ್ಯ ಹಸ್ತಾಂತರ, ರಾಜೇಶ ಜೈನ್‌ರಿಂದ 1500 ಚಪಾತಿ, ಕುರ್ಮಾ ವಿತರಣೆ

270520 Raichur Quarantine Center Chapati, Kurma
Published on

ರಾಯಚೂರು: ಕ್ವಾರಂಟೈನ್ ಕೇಂದ್ರದಲ್ಲಿರುವ ವಲಸಿಗರಿಗಾಗಿ ಸಿದ್ಧಪಡಿಸಿದ್ದ 1500 ಚಪಾತಿ, ಕುರ್ಮಾವನ್ನು ರಾಜೇಶಜೈನ್ ಎಂಬುವರು ನಗರದ ವೀರಶೈವ ಕಲ್ಯಾಣ ಮಂಟಪದ ಬಳಿ ಬುಧವಾರ ಸಹಾಯಕ ಆಯುಕ್ತ ಸಂತೋಷ ಕುಮಾರಗೆ ಹಸ್ತಾಂತರಿಸಿದರು.

ಅಲ್ಲದೆ, ನಗರದ ವಿವಿಧ ನಾಗರಿಕರಿಂದ, ಸಮಾನ ಮನಸ್ಕರಿಂದ ರೋಟಿ ತಂಡ ಸಂಗ್ರಹಿಸಿದ ವಿವಿಧ ಹಣ್ಣು, ಒಣ ಆಹಾರ ಪದಾರ್ಥಗಳನ್ನು ಕ್ವಾರಂಟೈನಲ್ಲಿರುವ ವಲಸಿಗರಿಗಾಗಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು. ಜಿಲ್ಲಾಡಳಿತ ನೀಡುತ್ತಿರುವ ಊಟದ ಜತೆಗೆ ಸಮಾನ ಮನಸ್ಕರು, ಉಳ್ಳವರು, ದಾನಿಗಳು ನೀಡುತ್ತಿರುವ ಊಟವನ್ನು ವಲಸಿಗರಿಗೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net