ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ

31Huk1-Web
ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಉಮೇಶ ಕತ್ತಿ ಚಾಲನೆ ನೀಡಿದರು. ರಾಚಯ್ಯ ಹಿರೇಮಠ, ಪರಗೌಡ ಪಾಟೀಲ, ಅನುಸೂಯಾ ಪಾಟೀಲ, ಎಸ್.ಕೆ.ಹುಕ್ಕೇರಿ, ಬಿ.ಕೆ.ಲಾಳಿ, ಎ.ಬಿ.ಪಟ್ಟಣಶೆಟ್ಟಿ, ಎಸ್.ಡಿ.ನಾಯಿಕ ಮತ್ತಿತರರಿದ್ದರು.
Published on

ಹುಕ್ಕೇರಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶಾಲಾ ಕೊಠಡಿ, ಎಸ್‌ಸಿ ಕಾಲನಿಗಳಲ್ಲಿ ಮೂಲಭೂತ ಸೌಲಭ್ಯ, ನೀರಾವರಿ ಕಾಮಗಾರಿಗಳಿಗೆ ಶಾಸಕ ಉಮೇಶ ಕತ್ತಿ ಭೂಮಿ ಪೂಜೆ ನೆರವೇರಿಸಿದರು.

ಲೋಕೋಪಯೋಗಿ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಚಿಕ್ಕ ನೀರಾವರಿ ಇಲಾಖೆಯಡಿ ತಾಲೂಕಿನ ಶಿರಹಟ್ಟಿ, ಸಾರಾಪುರ, ಎಲಿಮುನ್ನೋಳಿ, ಗೌಡವಾಡ, ಬಸ್ತವಾಡ, ಮದಮಕ್ಕನಾಳ, ಬೆಣಿವಾಡ, ಮದಿಹಳ್ಳಿ, ಶಿರಗಾವ, ಅವರಗೋಳ, ನೊಗನಿಹಾಳ, ಘೋಡಗೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 8.14 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳಿಗೆ ಶಾಸಕ ಕತ್ತಿ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕ ಉಮೇಶ ಕತ್ತಿ ಅವರು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ರೈತರು ಕೃಷಿಯಲ್ಲಿ ತೊಡಗಲು ಅವಶ್ಯವಾದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಾಲಾ ಕೊಠಡಿಗಳ ನಿರ್ಮಾಣ, ರೈತರು ಬೆಳೆದ ಬೆಳೆ ಸಾಗಣೆಗೆ ಸಮರ್ಪಕ ರಸ್ತೆ, ಗ್ರಾಮಗಳ ಸ್ವಚ್ಛತೆಗೆ ಚರಂಡಿಗಳ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು. ಇಲ್ಲವಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಬಿಜೆಪಿ ಮಂಡಲ ಮತ್ತು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರಾಚಯ್ಯ ಹಿರೇಮಠ, ನಿರ್ದೇಶಕ ಪರಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯೆ ಅನುಸೂಯಾ ಪಾಟೀಲ, ಎಸ್.ಕೆ.ಹುಕ್ಕೇರಿ, ತಾಪಂ ಇಒ ಬಿ.ಕೆ.ಲಾಳಿ, ಎ.ಬಿ.ಪಟ್ಟಣಶೆಟ್ಟಿ, ಎಸ್.ಡಿ.ನಾಯಿಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net