ಗುಣಮಟ್ಟದ ಕಾಮಗಾರಿಗೆ ಆದ್ಯತೆ ಸಿಗಲಿ

26Aratal1
Published on

ಅರಟಾಳ: ಇಲ್ಲಿನ ಪಶುಚಿಕಿತ್ಸಾಲಯಕ್ಕೆ ನೂತನ ಕಟ್ಟಡ ಮಂಜೂರಾಗಿದ್ದು, ಜಾನುವಾರುಗಳ ಚಿಕಿತ್ಸೆಗೆ ಅನುಕೂಲವಾಗಲಿದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಗ್ರಾಮದಲ್ಲಿ ೫೦ ಲಕ್ಷ ರೂ. ವೆಚ್ಚದ ಪಶುಚಿಕಿತ್ಸಾಲಯ ಕಟ್ಟಡಕ್ಕೆ ಮಂಗಳವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿ, ಗುತ್ತಿಗೆದಾರರು ಗುಣಮಟ್ಟದ ಕಟ್ಟಡ ನಿರ್ಮಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಕಾಂತಾಬಾಯಿ ಹಟ್ಟಿ, ಉಪಾಧ್ಯಕ್ಷ ಸದಾಶಿವ ಹೊನಗೌಡ, ಪಿಡಿಒ ಎ.ಜಿ.ಎಡಕೆ, ತಾಲೂಕು ಪಶು ವೈದ್ಯಾಧಿಕಾರಿ ನಾಮದೇವ ಕಾಂಬಳೆ, ಮಲ್ಲಪ್ಪ ಪೂಜಾರಿ, ಎಸ್.ಆರ್.ಗುಳ್ಳಪನವರ, ರಾಮಪ್ಪ ಪೂಜಾರಿ, ಗಂಗವ್ವ ಅರ್ಜುಣಗಿ, ಈಶ್ವರಲಿಂಗ ಕಲಘಟಗಿ, ರಮೇಶ ಜಾಧವ, ಯಲ್ಲಪ್ಪ ಹಟ್ಟಿ, ಅರವಿಂದ ಘಾಟಗೆ, ಮನೋಹರ ಸಾಳುಂಕೆ, ಶಂಕರ ಕೆಂಚಗೊಂಡ, ರಾವಸಾಹೇಬ ಹೊನಗೌಡ, ಶಿವಲಿಂಗಪ್ಪ ಜಂಬಗಿ, ಹನುಮಂತ ಹಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net