ಗುಣಮಟ್ಟದ ಕಾಮಗಾರಿ ಕೈಗೊಳ್ಳಲಿ

8
ಮುದೇನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ನಿರ್ಮಾಣ ಕಾಮಗಾರಿಗೆ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಭೂಮಿಪೂಜೆ ನೆರವೇರಿಸಿದರು. ಆರ್.ಟಿ ಬಳಿಗಾರ, ಜಾನಪ್ಪ ಹಕಾಟಿ, ಚಂದ್ರಕಾಂತ ಹಕಾಟಿ, ಕಷ್ಣ ಪೆಟ್ಲೂರ, ಹನುಮಂತ ದೇಸಾಯಿ ಇತರರಿದ್ದರು.
Published on

ರಾಮದುರ್ಗ: ಸರ್ಕಾರದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಸತತ ಪ್ರಯತ್ನದ ಲವಾಗಿ ಅನುದಾನ ಬಿಡುಗಡೆ ಮಾಡಿಸಿದ್ದು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

ತಾಲೂಕಿನ ನಂದಿಹಾಳ ಕ್ರಾಸ್‌ದಿಂದ ತಿಮ್ಮಾಪುರ ಎಸ್‌ಎಲ್‌ಟಿ ಕೂಡು ರಸ್ತೆಯ 19 ಲಕ್ಷ ರೂ. ವೆಚ್ಚದ ಡಾಂಬರೀಕರಣ, 80 ಲಕ್ಷ ರೂ. ವೆಚ್ಚದಲ್ಲಿ ಮುದೇನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಎಲ್ಲ ಕಾಮಗಾರಿಗಳನ್ನು ಹಂತಹಂತವಾಗಿ ಮುಗಿಸಲಾಗುವುದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ ಬಳಿಗಾರ, ಮುಖಂಡರಾದ ಜಾನಪ್ಪ ಹಕಾಟಿ, ಚಂದ್ರಕಾಂತ ಹಕಾಟಿ, ಕಷ್ಣ ಪೆಟ್ಲೂರ, ರಾಮಣ್ಣ ಬೀಡಕಿ, ಹನುಮಂತ ದೇಸಾಯಿ, ಗಣಪತಿ ಬಸಿಡೋಣಿ, ಕೀರಗೌಡ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net