

ರಾಯಬಾಗ: ರಾಜ್ಯ ಹೆದ್ದಾರಿಗಳ ರಸ್ತೆ ಸುಧಾರಿಸುವುದರಿಂದ ಅಂತಾರಾಜ್ಯ ವ್ಯಾಪಾರ ವೃದ್ಧಿಯಾಗುವ ಜತೆಗೆ ರೈತರು ಬೆಳೆದ ಬೆಳೆಗಳನ್ನು ಸಾಗಿಸಲು ಅನುಕೂಲವಾಗುವುದು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 6 ಕೋಟಿ ರೂ. ಅನುದಾನದಲ್ಲಿ ಮಂಗಸೂಳಿ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಆಯ್ದ ಭಾಗಗಳ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಗುತ್ತಿಗೆದಾರರು ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬೇಕೆಂದು ಸೂಚಿಸಿದರು.
ಪಪಂ ಅಧ್ಯಕ್ಷ ಅಶೋಕ ಅಂಗಡಿ, ಎಇಇ ಆರ್.ಬಿ.ಮನವಡ್ಡರ, ಅಭಿಯಂತರರಾದ ಶ್ರೀಧರ ಮೇಗಲಮನಿ, ವೈ.ಆರ್.ಕಾಂಬಳೆ, ಸದಾಶಿವ ಘೋರ್ಪಡೆ, ಸದಾನಂದ ಹಳಿಂಗಳಿ, ಮಹೇಶ ಕರಮಡಿ, ರಫಿಕ್ ತರಡೆ, ಸಂಗಣ್ಣ ದತ್ತವಾಡೆ, ಸುರೇಶ ಮಾಳಿ, ಸುಭಾಷ ಕಾಂಬಳೆ, ರಿತೀಶ ಅವಳೆ, ಶಿವು ಕೋಳಿ, ಜಯಾನಂದ ಹಿರೇಮಠ, ಕೃಷ್ಣಾ ಕುಲಗುಡೆ ಇತರಿದ್ದರು.