

ಮಾನ್ವಿ: ರೈತರಿಂದ ಜೋಳ ಖರೀದಿಸುವಾಗ ಮೊದಲು ಪರೀಕ್ಷೆಗೆ ಒಳಪಡಿಸಿ ನಂತರ ಗುಣಮಟ್ಟದ ಉತ್ಪನ್ನ ಮಾತ್ರ ಖರೀದಿಸಬೇಕು ಎಂದು ಸಹಕಾರ ಸಂಘದ ವ್ಯವಸ್ಥಾಪಕ ದೇವರೆಡ್ಡಿಗೆ ಸಹಾಯಕ ಆಯುಕ್ತ ಗಜಾನನ ಬಾಲೆ ಸೂಚನೆ ನೀಡಿದರು.
ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದ ಪ್ರಾಕೃಪಸ ಸಂಘದಲ್ಲಿ ತೆರೆದಿರುವ ಜೋಳ ಖರೀದಿ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿ ಮಾತನಾಡಿದರು. ಸರ್ಕಾರವು ಜೋಳ ಬೆಳೆದ ರೈತರಿಂದ ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಆರಂಭಿಸಲಾಗಿದೆ.
ಈಗಾಗಲೇ ನೋಂದಣಿ ಮಾಡಿಸಿದವರಿಂದ ಜೋಳವನ್ನು ಖರೀದಿಸುವಾಗ ನಿಯಮಗಳನ್ನು ಪಾಲಿಸಬೇಕು. ಕೇಂದ್ರದಲ್ಲಿ ರೈತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತಿಳಿಸಿದರು. ತಹಸೀಲ್ದಾರ್ ರಾಜು ಪಿರಂಗಿ, ಆಹಾರ ನಿರೀಕ್ಷಕ ದೇವರಾಜ, ಕಂದಾಯ ನಿರೀಕ್ಷಕ ಸತೀಶ್ ಇತರರಿದ್ದರು.